‘ಮದುವೆ’ಯ ನಂತ್ರ ಹೀಗೆ ಬದಲಾಗ್ತಾರೆ ಭಾರತೀಯ ಪುರುಷರು

ಮದುವೆ ನಂತ್ರ ಹುಡುಗಿಯರಿಗೆ ಹೊಂದಾಣಿಕೆ ಅನಿವಾರ್ಯ. ಹೊಸ ಮನೆ, ಹೊಸ ಜನ, ಹೊಸ ಜವಾಬ್ದಾರಿಗೆ ಹೊಂದಿಕೊಳ್ಳಬೇಕಾಗುತ್ತದೆ. ಉತ್ತಮ ಸೊಸೆ, ಪತ್ನಿ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಹುಡುಗಿಯರು ಮಾತ್ರವಲ್ಲ ಮದುವೆ ನಂತ್ರ ಹುಡುಗ್ರ ಜೀವನದಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ಭಾರತೀಯ ಪುರುಷರು ಮದುವೆ ನಂತ್ರ ಸಾಕಷ್ಟು ಬದಲಾಗ್ತಾರೆ.

ಮದುವೆಗಿಂತ ಮೊದಲು ಹುಡುಗ್ರ ಮೇಲೆ ಹೆಚ್ಚು ಜವಾಬ್ದಾರಿಗಳಿರುವುದಿಲ್ಲ. ಆದ್ರೆ ಮದುವೆ ನಂತ್ರ ಜವಾಬ್ದಾರಿ ಹೆಚ್ಚಾಗುತ್ತದೆ. ದಾಂಪತ್ಯ ತುಂಬಾ ಸೂಕ್ಷ್ಮವಾಗಿದ್ದು, ಸಾಕಷ್ಟು ಬದಲಾವಣೆ ಅನಿವಾರ್ಯವಾಗುತ್ತದೆ.

ಏಕಾಂಗಿಯಾಗಿ ಬದುಕಲು ಹುಡುಗ್ರು ಇಷ್ಟಪಡ್ತಾರೆ. ಬೇರೆಯವರ ಜೊತೆ ತಮ್ಮ ವಿಚಾರವೊಂದೇ ಅಲ್ಲ ವಸ್ತುಗಳನ್ನು ಕೂಡ ಹಂಚಿಕೊಳ್ಳುವುದಿಲ್ಲ. ಮದುವೆ ನಂತ್ರ ವಿಚಾರದ ಜೊತೆ ಎಲ್ಲವನ್ನೂ ಹಂಚಿಕೊಳ್ಳಬೇಕಾಗುತ್ತದೆ. ಮಲಗುವ ಮಂಚದಿಂದ ಹಿಡಿದು ಎಲ್ಲವನ್ನೂ ಜೀವನ ಸಂಗಾತಿ ಜೊತೆ ಹಂಚಿಕೊಂಡು ಬದುಕಬೇಕಾಗುತ್ತದೆ.

ಮದುವೆಗಿಂತ ಮೊದಲು ಸ್ನೇಹಿತರ ಜೊತೆ ಪಾರ್ಟಿ, ನೈಟ್ ಔಟ್ ಮಾಮೂಲಿ. ಮದುವೆಯಾದ್ಮೇಲೆ ಪತ್ನಿ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟಪಡ್ತಾರೆ. ಕುಟುಂಬಕ್ಕೆ ಮೊದಲ ಆದ್ಯತೆ ನೀಡಲು ಶುರು ಮಾಡ್ತಾರೆ.

ಮದುವೆ ನಂತ್ರ ಉಳಿತಾಯದ ಬಗ್ಗೆ ಚಿಂತಿಸಲು ಶುರು ಮಾಡ್ತಾರೆ. ಮದುವೆಗೆ ಮುನ್ನ ಬೇಕಾಬಿಟ್ಟಿ ಖರ್ಚು ಮಾಡ್ತಿದ್ದ ಹುಡುಗ್ರು ಮದುವೆ ನಂತ್ರ ಒಂದು ವಸ್ತು ಖರೀದಿ ಮುನ್ನವೂ ನೂರು ಬಾರಿ ಆಲೋಚನೆ ಮಾಡ್ತಾರೆ.

ಮದುವೆಗೆ ಮುನ್ನ ಮನಸ್ಸಿಗೆ ಬಂದಂತೆ ಜೀವನ ನಡೆಸುವ ಹುಡುಗ್ರು ಮದುವೆಯಾಗ್ತಿದ್ದಂತೆ ಭಾವನಾತ್ಮಕವಾಗಿ ಬೆರೆಯಲು ಶುರು ಮಾಡ್ತಾರೆ. ಪತ್ನಿ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಶುರು ಮಾಡ್ತಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read