ಸೊಳ್ಳೆಯಿಂದ ಹರಡುವ ಈ ರೋಗದ ಬಗ್ಗೆ ನಿಮಗೆ ತಿಳಿದಿರಲಿ‌ ಈ ಮಾಹಿತಿ

ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗ. ಈ ಸೊಳ್ಳೆ ಯಾವ ಸಮಯದಲ್ಲಿಯಾದ್ರೂ ನಿಮಗೆ ಕಚ್ಚಬಹುದು.

ಈ ಸಮಯದಲ್ಲಿ ಡೆಂಗ್ಯೂ ರೋಗದ ಲಕ್ಷಣ ಹಾಗೂ ಅದು ಹರಡಲು ಕಾರಣ ಏನೆಂಬುದನ್ನು ನೀವು ಅರಿಯಬೇಕಾಗುತ್ತದೆ. ಡೆಂಗ್ಯೂ ಬಗ್ಗೆ ಸ್ವಲ್ಪ ಮಾಹಿತಿ ನಿಮಗಿರುವುದು ಒಳ್ಳೆಯದು.

ಡೆಂಗ್ಯೂ ಆರಂಭದಲ್ಲಿ ವಿಪರೀತ ಚಳಿ ಕಾಣಿಸಿಕೊಳ್ಳುತ್ತದೆ. ತಲೆನೋವು, ಸೊಂಟ ನೋವು ಹಾಗೂ ಕಣ್ಣು ನೋವು ಕಾಣಿಸಿಕೊಳ್ಳುತ್ತದೆ. ಇದ್ರ ಜೊತೆಗೆ ಜ್ವರ ಕಾಡುತ್ತದೆ. ಕೀಲು ನೋವು, ಆತಂಕ, ವಾಂತಿ ಶುರುವಾಗುತ್ತದೆ.

ಇವುಗಳಲ್ಲಿ ಒಂದು ಲಕ್ಷಣ ಕಾಣಿಸಿಕೊಂಡ್ರೂ ತಕ್ಷಣ ವೈದ್ಯರ ಭೇಟಿ ಮಾಡುವುದು ಸೂಕ್ತ. ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಶುರು ಮಾಡದಿದ್ದಲ್ಲಿ ಅಪಾಯ ನಿಶ್ಚಿತ. ಜೊತೆಗೆ ನೀರು ಹಾಗೂ ಪಾನೀಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಪಪ್ಪಾಯಿ ಎಲೆಯ ರಸ ಡೆಂಗ್ಯೂಗೆ ಹೇಳಿ ಮಾಡಿಸಿದ ಔಷಧಿ. ಇದನ್ನು ಕೂಡ ಸೇವನೆ ಮಾಡಬಹುದು.

ಡೆಂಗ್ಯೂ ಬಂದ ಮೇಲೆ ಎಚ್ಚರಿಕೆ ವಹಿಸುವ ಬದಲು ಬರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗ. ಆದಷ್ಟು ಮನೆಯೊಳಗೆ ಸೊಳ್ಳೆ ಬರದಂತೆ ನೋಡಿಕೊಳ್ಳಿ. ಮನೆಯಲ್ಲಿ ಕೊಳಕು ನೀರು ಸಂಗ್ರಹವಾಗಿರದಂತೆ ನೋಡಿಕೊಳ್ಳಿ. ಮನೆ ಆಸುಪಾಸು ಕೊಳೆ ನೀರು ಸಂಗ್ರಹವಾಗಲು ಬಿಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read