Viral Video | ಸ್ಟ್ರಾಬೆರ‍್ರಿ ಹಾಕಿ ಚಿಕನ್ ಬಿರಿಯಾನಿ; ’ಇನ್ನೂ ಏನೇನೆಲ್ಲಾ ನೋಡ್ಬೇಕಪ್ಪಾ’ ಅಂದ ನೆಟ್ಟಿಗರು

ಬಿರಿಯಾನಿ ಎಂದರೆ ಇಡೀ ಉಪಖಂಡವೇ ಬಾಯಲ್ಲಿ ನೀರೂರಿಸುತ್ತೆ ಎಂದು ಬಿಡಿಸಿ ಹೇಳಬೇಕೇ? ಉದುರುದುರಾದ ಅನ್ನದ ಅಗುಳುಗಳಿಂದ ಬರುವ ಹಬೆಯಲ್ಲಿ ಮಸಾಲೆಯ ಘಮ ಹಾಗೂ ಹದವಾಗಿ ಬೆಂದ ಮಾಂಸದ ತುಂಡುಗಳಿರುವ ಈ ತಿನಿಸು ಭಾರತದ ಅತ್ಯಂತ ಜನಪ್ರಿಯ ಖಾದ್ಯವಾಗಿದೆ.

ಜಗತ್ತಿನಾದ್ಯಂತ ಬಿರಿಯಾನಿಯ ಅನೇಕ ಅವತಾರಗಳಿವೆ. ಭಾರತದಲ್ಲೇ ತೆಗೆದುಕೊಂಡರೂ ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ಬಿರಿಯಾನಿ ಇದೆ. ಕೋಲ್ಕತ್ತಾದಲ್ಲಿ ಮಾಡುವ ಬಿರಿಯಾನಿಗೆ ಮಾಂಸದ ತುಂಡುಗಳೊಂದಿಗೆ ಆಲೂಗೆಡ್ಡೆ ಹಾಕುವುದನ್ನು ಕಂಡಿದ್ದೇವೆ. ಆದರೆ ಬಿರಿಯಾನಿಗೆ ಯಾವತ್ತಾದರೂ ಹಸಿ ಹಸಿ ಹಣ್ಣುಗಳನ್ನು ಹಾಕುವುದನ್ನು ನೋಡಿದ್ದೀರಾ?

ಬ್ರಿಟನ್‌ನಲ್ಲಿ ವಾಸಿಸುವ ಪುಷ್ಪಕ್ ಸಿಧು ಹೆಸರಿನ ಈತ ಸ್ಟ್ರೇಬೆರ‍್ರಿ ಹಾಕಿ ಬಿರಿಯಾನಿ ಮಾಡುವ ವಿಡಿಯೋ ಶೇರ್‌ ಮಾಡಿದ್ದಾನೆ. “ಬಿರಿಯಾನಿಯನ್ನು ಹೀಗೆ ಮಾಡಬೇಡಿ,” ಎಂದು ಕ್ಯಾಪ್ಷನ್ ಕೊಟ್ಟು ಶೇರ್‌ ಮಾಡಲಾಗಿರುವ ಈ ವಿಡಿಯೋ ನೋಡಿದ ನೆಟ್ಟಿಗರು, ’ಹೀಗೂ ಉಂಟೇ?’ ಎಂದು ಮೂಗು ಮುರಿದಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read