ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುತ್ತೆ ಮನೆಯಲ್ಲೇ ಮಾಡಬಹುದಾದ ಈ ಹೇರ್‌ ಮಾಸ್ಕ್‌….!

ಕೂದಲಿನ ಸೌಂದರ್ಯ ಮತ್ತು ಆರೋಗ್ಯ ಕಾಪಾಡಿಕೊಳ್ಳೋದು ಬಹುದೊಡ್ಡ ಸವಾಲು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಸಮರ್ಪಕ ಜೀವನಶೈಲಿ ಮತ್ತು ವಿಷಯುಕ್ತ ರಾಸಾಯನಿಕಗಳುಳ್ಳ ಆಹಾರದಿಂದ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೂದಲು ಉದುರುವುದು, ಒಡೆಯುವುದು, ದುರ್ಬಲವಾಗುವುದು, ಬೆಳವಣಿಗೆಯ ಕೊರತೆ, ಹೊಟ್ಟು ಹೀಗೆ ಅನೇಕ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ಆದ್ದರಿಂದ ಕೂದಲಿನ ಬಗ್ಗೆ ಸರಿಯಾದ ಕಾಳಜಿ ವಹಿಸುವುದು ಬಹಳ ಮುಖ್ಯ. ಕೂದಲಿನ ಈ ಸಮಸ್ಯೆಗಳನ್ನು ನಿವಾರಿಸಲು ನಾವು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳ ಮೊರೆಹೋಗುತ್ತೇವೆ. ಆದ್ರೆ ಅವುಗಳಲ್ಲಿ ರಾಸಾಯನಿಕಗಳಿರುವುದರಿಂದ ನಿಮ್ಮ ಕೂದಲಿನ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹಾಗಾಗಿ ಮೊಟ್ಟೆ ಮತ್ತು ಆಲಿವ್ ಆಯಿಲ್‌ ಹೇರ್ ಮಾಸ್ಕ್‌ ಅನ್ನು ಟ್ರೈ ಮಾಡಿ ನೋಡಿ. ಇದರಿಂದ ನೀವು ಕೂದಲಿನ ಅನೇಕ ಸಮಸ್ಯೆಗಳನ್ನು ತೊಡೆದುಹಾಕಬಹುದು.

ತಲೆಹೊಟ್ಟು ನಿಮ್ಮ ಕೂದಲನ್ನು ದುರ್ಬಲಗೊಳಿಸುತ್ತದೆ. ಸ್ಕಾಲ್ಪ್‌ನಲ್ಲಿ ವಿಪರೀತ ತುರಿಕೆಗೆ ಕಾರಣವಾಗುತ್ತದೆ. ಮೊಟ್ಟೆ ಮತ್ತು ಆಲಿವ್ ಆಯಿಲ್‌ ಹೇರ್‌ ಮಾಸ್ಕ್‌ ಬಳಸಿದ್ರೆ ತಲೆಹೊಟ್ಟನ್ನು ನಿವಾರಿಸಬಹುದು. ಈ ಹೇರ್ ಮಾಸ್ಕ್ ನಿಮ್ಮ ಕೂದಲನ್ನು ಸ್ಟ್ರಾಂಗ್ ಮಾಡಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಮೊಟ್ಟೆಯಲ್ಲಿರುವ ಪ್ರೋಟೀನ್ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾಗಿ ಈ ಹೇರ್‌ ಮಾಸ್ಕ್‌ ಅನ್ನು ನಿಯಮಿತವಾಗಿ ಬಳಸಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.

ಈ ಹೇರ್ ಮಾಸ್ಕ್ ಬಳಸುವುದರಿಂದ ಕೂದಲಿಗೆ ತೇವಾಂಶ ಸಿಗುತ್ತದೆ. ಇದು ಕೂದಲಿಗೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಕೂದಲಿಗೆ ಸಾಕಷ್ಟು ಪೋಷಣೆಯನ್ನು ಒದಗಿಸಲು ಸಹಾಯ ಮಾಡುತ್ತದೆ. ಇದನ್ನು ತಯಾರಿಸುವುದು ಕೂಡ ಸುಲಭ. ಮೊಟ್ಟೆಯನ್ನ ಒಡೆದು ಅದರ ಹಳದಿ ಭಾಗವನ್ನು ತೆಗೆದು ಹಾಕಿಬಿಡಿ. ಮೊಟ್ಟೆಯ ಬಿಳಿ ಭಾಗವನ್ನ ಬೌಲ್‌ ಒಂದಕ್ಕೆ ಸುರಿಯಿರಿ.

ಅದಕ್ಕೆ ಎರಡು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಹೇರ್‌ ಮಾಸ್ಕ್‌ ಅನ್ನು ಕೂದಲಿಗೆ ಚೆನ್ನಾಗಿ ಹಚ್ಚಿ ಒಂದು ಗಂಟೆ ಹಾಗೇ ಬಿಡಿ. ನಂತರ ಶಾಂಪೂವಿನಿಂದ ಸ್ವಚ್ಛವಾಗಿ ತೊಳೆಯಿರಿ. ನಿಯಮಿತವಾಗಿ ಈ ಮಾಸ್ಕ್‌ ಬಳಸಿದರೆ ಪರಿಣಾಮ ನಿಮಗೇ ಗೋಚರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read