ಈ ಒಂದು App ಇದ್ದರೆ ಸಾಕು ಪ್ರಯಾಣದ ಸಮಯದಲ್ಲಿ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗಿಲ್ಲ…!

ಭಾರತ ಸರ್ಕಾರ ನಾಗರಿಕರಿಗಾಗಿ ಅನೇಕ ಹೊಸ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳಲ್ಲೊಂದು mParivahan ಅಪ್ಲಿಕೇಶನ್. ಈ ಅಪ್ಲಿಕೇಶನ್ ಮೂಲಕ ನಾಗರಿಕರು ವಿವಿಧ ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆದುಕೊಳ್ಳಬಹುದು.ಈ ಅಪ್ಲಿಕೇಶನ್ ಅನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಭಿವೃದ್ಧಿಪಡಿಸಿದೆ. ಇದರ ಪ್ರಯೋಜನಗಳು ಮತ್ತು ಬಳಕೆ ಬಗ್ಗೆ ತಿಳಿದುಕೊಳ್ಳೋಣ.

mParivahan ಅಪ್ಲಿಕೇಶನ್‌ನ ಪ್ರಯೋಜನಗಳು

ಡ್ರೈವಿಂಗ್‌ ಲೈಸನ್ಸ್‌ ಮತ್ತು ನೋಂದಣಿ ಪ್ರಮಾಣಪತ್ರ

ಈ ಅಪ್ಲಿಕೇಶನ್‌ನ ಬಹುದೊಡ್ಡ ಪ್ರಯೋಜನವೆಂದರೆ ಇದರಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪ್ರಮಾಣಪತ್ರವನ್ನು (RC) ಡೌನ್‌ಲೋಡ್ ಮಾಡಬಹುದು. ಈ ಅಪ್ಲಿಕೇಶನ್‌ ಇದ್ದರೆ ಪ್ರಯಾಣದ ಸಮಯದಲ್ಲಿ ಹಾರ್ಡ್ ಕಾಪಿಯನ್ನು ಇಟ್ಟುಕೊಳ್ಳಬೇಕಾಗಿಲ್ಲ.

ಟ್ರಾಫಿಕ್‌ ಚಲನ್‌ ಪಾವತಿ

ಈ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಟ್ರಾಫಿಕ್ ಚಲನ್ ಪಾವತಿಸಬಹುದು. ಇದಕ್ಕಾಗಿ ಎಲ್ಲಿಯೂ ಹೋಗಬೇಕಾಗಿಲ್ಲ. ಅಪ್ಲಿಕೇಶನ್ ಅನ್ನು ನಿರ್ವಹಿಸುವುದು ಕೂಡ ತುಂಬಾ ಸುಲಭ.

mParivahan ಆ್ಯಪ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡುವುದು ಹೇಗೆ ?

ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

Google Play Store ಅಥವಾ Apple App Store ನಿಂದ mParivahan ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.

ಮೊಬೈಲ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯನ್ನು ನಮೂದಿಸುವ ಮೂಲಕ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಅಪ್ಲಿಕೇಶನ್‌ಗೆ ಲಾಗಿನ್ ಮಾಡಬಹುದು.

ಇಲ್ಲಿ ಇಶ್ಯೂ ಡಾಕ್ಯುಮೆಂಟ್‌ಗಳನ್ನು ಪಡೆಯಿರಿ ಎಂಬ ಆಯ್ಕೆಯಿದೆ.

ನಂತರ ಸರ್ಚ್‌ ಸೆಕ್ಷನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಟೈಪ್ ಮಾಡಿ ಮತ್ತು ಹುಡುಕಿ.

ಬಳಿಕ  ಡ್ರೈವಿಂಗ್ ಲೈಸೆನ್ಸ್ ಪಡೆದ ರಾಜ್ಯದ ಹೆಸರನ್ನು ಆಯ್ಕೆ ಮಾಡಿಕೊಳ್ಳಿ.

ನಿಮ್ಮ ಡಿಎಲ್ ಸಂಖ್ಯೆಯನ್ನು ನಮೂದಿಸಿದ ನಂತರ, ಗೆಟ್ ಡಾಕ್ಯುಮೆಂಟ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

ಡ್ರೈವಿಂಗ್ ಲೈಸೆನ್ಸ್ ನಿಮಗೆ ಲಭ್ಯವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read