ದರೋಡೆಕೋರರನ್ನು ರಕ್ಷಣೆ ಮಾಡೋಕೆ ಈ ಸರ್ಕಾರ ಇರುವುದು : H.D ಕುಮಾರಸ್ವಾಮಿ ಕಿಡಿ

ಬೆಂಗಳೂರು : ದರೋಡೆಕೋರರನ್ನು ರಕ್ಷಣೆ ಮಾಡಲು ಈ ಸರ್ಕಾರ ಇರುವುದು ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನುಸರ್ಕಾರ ವಾಪಸ್ ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ.

ದರೋಡೆಕೋರರನ್ನು ರಕ್ಷಣೆ ಮಾಡಲು ಈ ಸರ್ಕಾರ ಇರುವುದು. ಕೋರ್ಟ್ನಲ್ಲಿ ಏನು ನಿರ್ಧಾರ ಆಗುತ್ತೆಂದು ನೋಡಿ ಮಾತಾಡುತ್ತೇನೆ. ಮರ್ಯಾದೆ ಇಲ್ಲದವರಿಗೆ ಕೋರ್ಟ್ನಲ್ಲಿ ಇದ್ದರೇನು, ಎಲ್ಲಿದ್ದರೇನು? ಎಲ್ಲವನ್ನೂ ದುಡ್ಡಿನಿಂದ ಕೊಂಡುಕೊಳ್ಳುತ್ತೇವೆ ಅನ್ನೋ ದುರಹಂಕಾರ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.

ಸರ್ಕಾರದ ಈ ತೀರ್ಮಾನ ಕಾನೂನು ಬಾಹಿರ. ಹೈಕೋರ್ಟ್ನಲ್ಲಿ ಇನ್ನೂ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣವನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು  ಸಂಸದ   ಬಿ,ವೈ ರಾಘವೇಂದ್ರ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read