ಅಮೋಘ ಪ್ರತಿಭೆ: ಹಿಂದೆ ಹೀಗಳೆದವರೇ ಇಂದು ಹಾಡಿ ಹೊಗಳಿದರು…!

ಜನರು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧಿಗೆ ಬರಲು ಅಸಾಧ್ಯವಾದ ಕೌಶಲ್ಯಗಳನ್ನು ತೋರಿಸುತ್ತಾರೆ. ಗಬಾನ್‌ನ ಜೌರೆಸ್ ಕೊಂಬಿಲಾ ಎಂಬಾತ ರಬ್ಬರ್‌ನಂತೆ ಸುತ್ತುವ ತನ್ನ ಕೌಶಲ್ಯಗಳನ್ನು ಹಂಚಿಕೊಂಡಿದ್ದಾನೆ. ಇದೀಗ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

ಕೊಂಬಿಲಾ ಚಿಕ್ಕವನಿರುವಾಗಿನಿಂದಲೇ ಈ ಕೌಶಲ ಹೊಂದಿದ್ದಾನೆ. ಆದರೆ ಆತ ಹೀಗೆ ಮಾಡಿದಾಗಲೆಲ್ಲಾ ಜನರು ಟೀಕಿಸುತ್ತಿದ್ದರಂತೆ.‌

ಆದ್ದರಿಂದ ತನ್ನಲ್ಲಿರುವ ಅಗಾಧ ಪ್ರತಿಭೆಯನ್ನು ಹೊರಕ್ಕೆ ತೋರಿಸಲು ಈತ ಮುಜುಗರ ಪಡುತ್ತಿದ್ದ. ಆದರೆ ಈಗ ಸಾಮಾಜಿಕ ಜಾಲತಾಣ ಬಹಳ ಪವರ್​ಫುಲ್​ ಆಗಿರುವುದರಿಂದ ಈತನ ಕೌಶಲ ಜಗಜ್ಜಾಹೀರವಾಗಿದೆ.

ಆದ್ದರಿಂದ ಕೊಂಬಿಲಾ ಸಾಮಾಜಿಕ ಮಾಧ್ಯಮಕ್ಕೆ ಧನ್ಯವಾದಗಳು ಎಂದಿದ್ದಾನೆ. ಈತ ತನ್ನ ದೇಹವನ್ನು ಸಾಧ್ಯವಿರುವ ರೀತಿಯಲ್ಲಿ ಬಗ್ಗಿಸುತ್ತಾನೆ. ಹಿಂದೊಮ್ಮೆ ಇದೇ ಕಾರಣಕ್ಕೆ ತನ್ನನ್ನು ಗ್ರಾಮದಿಂದ ಬಹಿಷ್ಕಾರ ಮಾಡಿದ್ದರು ಎಂದು ಹೇಳಿಕೊಂಡಿರುವ ಇದೇ ಕೊಂಬಿಲಾನನ್ನು ಜನರು ಈಗ ಹಾಡಿ ಹೊಗಳುತ್ತಿದ್ದಾರೆ. ಶ್ಲಾಘನೆಗಳ ಸುರಿಮಳೆಯಾಗಿದೆ. ಹಲವು ಕಾರ್ಯಕ್ರಮಗಳನ್ನು ಈತನನ್ನು ಆಹ್ವಾನಿಸಲಾಗುತ್ತಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read