ಕೊಲೆಸ್ಟ್ರಾಲ್ ನಿಂದ ಮುಕ್ತಿ ನೀಡುತ್ತೆ ಈ ಹಣ್ಣು

ಕಿತ್ತಲೆ ಹಣ್ಣು ಹುಳಿ ಮಿಶ್ರಿತ ಸಿಹಿಯಾಗಿರುವುದರಿಂದ ತಿನ್ನಲು ಬಹಳ ರುಚಿ. ಇದರಲ್ಲಿ ಸಿಟ್ರಸ್ ಅಂಶ ಮಾತ್ರವಲ್ಲದೆ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ಬಹಳ ಸಹಕಾರಿ. ಇದರಲ್ಲಿ ಹೇರಳವಾಗಿ ಬೀಟಾ ಕೆರೋಟಿನ್ ಇದ್ದು, ದೇಹದಲ್ಲಿನ ಜೀವಕಣಗಳನ್ನು ಸಂರಕ್ಷಿಸುತ್ತದೆ.
ರೋಗನಿರೋಧಕ

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿನ ಮಟ್ಟದಲ್ಲಿದ್ದು, ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ. ಹಾಗೇ ವೈರಲ್ ಸೋಂಕುಗಳಿಂದ ದೂರವಿರಬಹುದು. ಕಿಡ್ನಿಯಲ್ಲಿ ಕಲ್ಲು ಸೇರಿಕೊಳ್ಳುವುದನ್ನು ತಡೆಯಬಹುದು.

ನಾರಿನಂಶ

ಫೈಬರ್ ಹೆಚ್ಚಿರುವ ಕಾರಣ ಮಲಬದ್ಧತೆಯಾಗದಂತೆ ಮಾಡುತ್ತದೆ.

ಕೊಲೆಸ್ಟ್ರಾಲ್ ನಿಂದ ಮುಕ್ತಿ

ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕರಗಿಸುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಕ್ಯಾಲ್ಶಿಯಂ

ಕಿತ್ತಲೆ ಹಣ್ಣು ತಿನ್ನುವುದರಿಂದ ಮೂಳೆ ಮತ್ತು ಹಲ್ಲುಗಳು ಗಟ್ಟಿಗೊಳ್ಳುತ್ತವೆ.

ಪೋಷಕಾಂಶಗಳು ಹೆಚ್ಚು

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಅಷ್ಟೇ ಅಲ್ಲದೆ ಯಥೇಚ್ಛವಾದ ಪೊಟ್ಯಾಷಿಯಂ ಅನ್ನು ಹೊಂದಿದೆ. ಇದರ ಸೇವನೆಯಿಂದ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು.

TAGGED:
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read