ಸೌಂದರ್ಯ ಮತ್ತು ಆರೋಗ್ಯ ದುಪ್ಪಟ್ಟು ಮಾಡುತ್ತೆ ಈ ಹಣ್ಣು

ಬೆಣ್ಣೆಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಇ ಸಮೃದ್ಧವಾಗಿದೆ. ಇದರಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಹೇರಳವಾಗಿದೆ. ಇದು ಅತ್ಯಂತ ಆರೋಗ್ಯ ಪ್ರಯೋಜನಕಾರಿ ಹಣ್ಣು. ಇದು ಹಲವಾರು ರೋಗ ನಿವಾರಣ ಶಕ್ತಿ ಹೊಂದಿದೆ. ಬೆಣ್ಣೆಹಣ್ಣಿನ ಕೆಲವೊಂದು ಪ್ರಯೋಜನಗಳ ಬಗ್ಗೆ ತಿಳಿಯೋಣ.

* ಮುಖದ ಚರ್ಮ ಒಣಗಿದ್ದರೆ ಬೆಣ್ಣೆ ಹಣ್ಣಿಗೆ ಬಾದಾಮಿ ಎಣ್ಣೆ ಕಲಸಿ ಮುಖಕ್ಕೆ ಲೇಪಿಸಿದರೆ ಚರ್ಮ ಮೃದುವಾಗುತ್ತದೆ.

* ನಿಯಮಿತವಾಗಿ ಬೆಣ್ಣೆ ಹಣ್ಣನ್ನು ಸೇವಿಸಿದರೆ ದೇಹದಲ್ಲಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ.

* ಬೆಣ್ಣೆ ಹಣ್ಣು ಮತ್ತು ಪಪ್ಪಾಯ ಹಣ್ಣಿನ ಜ್ಯೂಸ್‌ ಸೇವಿಸಿದರೆ ಅಸಿಡಿಟಿ ನಿವಾರಣೆಯಾಗುತ್ತದೆ.

* ಬೆಣ್ಣೆ ಹಣ್ಣಿನ ಪೇಸ್ಟ್‌ಗೆ ಜೇನುತುಪ್ಪ ಸೇರಿಸಿ ಮುಖಕ್ಕೆ ಲೇಪಿಸಿದರೆ ಮೊಡವೆಗಳು ಶಮನವಾಗುತ್ತವೆ.

* ಉಗುರು ತೆಳ್ಳಗಿದ್ದು, ಪದೇ ಪದೇ ಮುರಿಯುತ್ತಿದ್ದರೆ ಪ್ರತಿ ದಿನ ಬೆಣ್ಣೆ ಹಣ್ಣಿನ ಎಣ್ಣೆಯನ್ನು ಉಗುರುಗಳಿಗೆ ಮಸಾಜ್‌ ಮಾಡಿದರೆ ಉಗುರು ಗಟ್ಟಿಯಾಗುತ್ತದೆ.

* ಬೆಳಗ್ಗೆ ಖಾಲಿ ಹೊಟ್ಟೆಗೆ ಬೆಣ್ಣೆ ಹಣ್ಣನ್ನು ಸೇವಿಸಿದರೆ ಗರ್ಭಿಣಿಯರ ವಾಂತಿ ನಿಲ್ಲುತ್ತದೆ.

* ಬೆಣ್ಣೆ ಹಣ್ಣಿನ ಎಲೆಗಳನ್ನು ರುಬ್ಬಿ ಹೇರ್‌ ಪ್ಯಾಕ್‌ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಕಪ್ಪಗಾಗುತ್ತದೆ.

* ಬೆಣ್ಣೆ ಹಣ್ಣಿಗೆ ನಿಂಬೆ ರಸ ಮತ್ತು ನೀರು ಸೇರಿಸಿ ಜ್ಯೂಸ್‌ ಮಾಡಿ ಕುಡಿದರೆ ದೇಹ ಶುದ್ಧಿಯಾಗುತ್ತದೆ.

* ಬೆಣ್ಣೆ ಹಣ್ಣಿನ ಬೀಜವನ್ನು ಒಣಗಿಸಿ ಪುಡಿ ಮಾಡಿ. ಆ ಪುಡಿಗೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಭೇದಿ ನಿಲ್ಲುತ್ತದೆ.

* ತುಟಿ ಒಡೆದಿದ್ದರೆ ಬೆಣ್ಣೆ ಹಣ್ಣನ್ನು ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಕಲಸಿ ತುಟಿಗಳಿಗೆ ಹಚ್ಚಿ 20 ನಿಮಿಷ ಬಿಟ್ಟರೆ ತುಟಿ ಮೃದುವಾಗುತ್ತದೆ.

* ಬೆಣ್ಣೆ ಹಣ್ಣಿಗೆ ಗುಲಾಬಿ ಎಣ್ಣೆ ಬೆರೆಸಿ ಸೋರಿಯಾಸಿಸ್‌ ಇರುವ ಜಾಗಕ್ಕೆ ಹಚ್ಚಿದರೆ ಚರ್ಮ ಮೃದುವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read