ಹೊಟ್ಟೆ ಕರಗಿಸಲು ನೆರವಾಗುತ್ತೆ ಈ ʼಆಹಾರʼ

ಎಲ್ಲರಿಗೂ ತಾವು ಫಿಟ್ ಆಗಿರಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಹೊಟ್ಟೆ ಸ್ವಲ್ಪ ದಪ್ಪವಾಗಿದೆ ಅಂದಾಕ್ಷಣ ಡಯಟ್ ಮಾಡಿ ದೇಹವನ್ನು ದಂಡಿಸುತ್ತಾರೆ. ಅದರ ಬದಲು ಬಾಯಿಗೆ ರುಚಿಸುವಂತಹ ಈ ಆಹಾರಗಳನ್ನು ಸೇವಿಸಿ ಹೊಟ್ಟೆ ದಪ್ಪವಾಗಿರುವುದನ್ನು ಕಡಿಮೆ ಮಾಡಬಹುದು. ಆ ಆಹಾರಗಳು ಯಾವುದೆಂಬುದು ಇಲ್ಲಿದೆ ನೋಡಿ.ಮೊಳಕೆ ಕಾಳು ಹಾಗೂ ಧಾನ್ಯ

ಡಯಟ್‌ ಎಂದು ಬಾಯಿಗೆ ರುಚಿಯಿಲ್ಲದ ಆಹಾರವನ್ನು ತಿಂದು ಕಷ್ಟ ಪಡುವುದು ಬೇಡ. ರಾಗಿ, ಗೋಧಿ, ಮೊಳಕೆ ಕಾಳುಗಳನ್ನು ಬಳಸಿ ರುಚಿ-ರುಚಿಯಾದ ಪದಾರ್ಥ ಮಾಡಿ ಸೇವಿಸಿ.

ಆರೋಗ್ಯಕರ ಬ್ರೇಕ್‌ ಫಾಸ್ಟ್

ತೆಳ್ಳಗಾಗಬೇಕೆಂದು ಕೆಲವರು ಬೆಳಗ್ಗೆ ಏನೂ ತಿನ್ನದೇ ಇರುವುದನ್ನು ನೋಡುತ್ತೇವೆ. ಹೀಗೆ ಮಾಡಿದರೆ ತೆಳ್ಳಗಾಗುವ ಬದಲು ಕಾಯಿಲೆ ಬೀಳುವುದು ಖಂಡಿತ. ಬೆಳಗ್ಗೆ ಬ್ರೆಡ್ ಸ್ಯಾಂಡ್‌ವಿಚ್‌, ಒಂದು ಗ್ಲಾಸ್‌ ಜ್ಯೂಸ್, ಉಪ್ಪಿಟ್ಟು, ಇಡ್ಲಿ, ಮೊಳಕೆ ಕಾಳುಗಳು ಹೀಗೆ ಏನಾದರೂ ಆರೋಗ್ಯಕರ ಆಹಾರವನ್ನು ತಿನ್ನಿ.

ಹೆಸರು ಬೇಳೆ

ಹೆಸರು ಬೇಳೆಯಲ್ಲಿ ಹೇರಳವಾಗಿ ಕ್ಯಾಲ್ಶಿಯಂ, ನಾರಿನಂಶ ಇದ್ದು ಕೊಬ್ಬು ಕರಗಿಸುವ ಗುಣವಿದೆ. ಸಾಕಷ್ಟು ಕ್ಯಾಲೊರಿ ನೀಡುವುದರಿಂದ ಬೇಗನೇ ನಮ್ಮ ಹೊಟ್ಟೆ ತುಂಬುತ್ತದೆ.

ಸೋರೆಕಾಯಿ

ಸೋರೆಕಾಯಿಯಲ್ಲಿ ವಿಟಮಿನ್ ಎ, ಸಿ, ಕ್ಯಾಲ್ಶಿಯಂ, ಮ್ಯಾಗ್ನಿಶಿಯಂ, ಫಾಸ್ಪರಸ್ ಮತ್ತು ಪೊಟಾಶಿಯಂ ಹೇರಳವಾಗಿದೆ. ಇದರಲ್ಲಿ ಕೇವಲ 73 ಕ್ಯಾಲೊರಿ ಇದ್ದು, ಡಯಟ್ ಗೆ ಹೇಳಿ ಮಾಡಿಸಿದ ತರಕಾರಿ. ಇದರಲ್ಲಿರುವ ವಿಟಮಿನ್ ಗಳು ಬೊಜ್ಜು ಕರಗಿಸಲು ನೆರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read