ಸುಂದರ ತ್ವಚೆಗೆ ಬೇಕು ಈ ಹೂವಿನ ಫೇಸ್ ಪ್ಯಾಕ್

ಹಿಂದಿನಿಂದಲೂ ಮಹಿಳೆಯರು ತಮ್ಮ ಸೌಂದರ್ಯ ವರ್ಧನೆಗೆ ವಿಶೇಷ ಕಾಳಜಿ ವಹಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳನ್ನು ಬಳಸಿ ಸುಂದರವಾಗಿ ಕಾಣಲು ಬಯಸುತ್ತಾರೆ. ಹಾಗೂ ಪಾರ್ಲರ್ ಮೊರೆ ಹೋಗುತ್ತಾರೆ.

ಮನೆಯಲ್ಲಿ ಕೆಲವು ತರಕಾರಿ, ಹಣ್ಣಿನ ಫೇಸ್ ಪ್ಯಾಕ್ ಹಚ್ಚಿಕೊಂಡು ತ್ವಚೆಯ ಸೌಂದರ್ಯ ಇಮ್ಮಡಿಗೊಳಿಸಿಕೊಳ್ಳುವ ಬಗ್ಗೆ ನಿಮಗೆ ತಿಳಿದಿದೆ. ಆದರೆ ಕೆಲವು ಸುಲಭವಾಗಿ ಸಿಗುವಂತಹ ಹೂವಿನಿಂದಲೂ ಫೇಸ್ ಪ್ಯಾಕ್ ತಯಾರಿಸಬಹುದು.

ದಾಸವಾಳ ಹೂವಿನ 2 ಎಸಳುಗಳನ್ನು 2 ಚಮಚ ಮೊಸರಿನಲ್ಲಿ ಸೇರಿಸಿ ರುಬ್ಬಿ ಅದಕ್ಕೆ 4-5 ಹನಿ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿರಿ. 20 ನಿಮಿಷದ ನಂತರ ಮುಖ ತೊಳೆದರೆ ಬೇಸಿಗೆಯ ಬಿಸಿಲಿನಿಂದ ಬಸವಳಿದ ಚರ್ಮಕ್ಕೆ ಒಳ್ಳೆಯ ಪ್ಯಾಕ್ ಆಗುತ್ತದೆ.

ಗುಲಾಬಿ ಹೂವಿನ ದಳಗಳನ್ನು ಬಿಡಿಸಿ ಸ್ವಲ್ಪ ನೀರಿನಲ್ಲಿ ಅರ್ಧ ಗಂಟೆ ಕಾಲ ನೆನೆಸಿಡಿ. ಅದಕ್ಕೆ 1 ಸ್ಪೂನ್ ಜೇನುತುಪ್ಪ ಸೇರಿಸಿ ರುಬ್ಬಿ ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆದುಕೊಂಡರೆ ಮುಖ ಹೂವಿನಂತೆ ಅರಳುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read