ಪಾರ್ಟಿಗೆ ಹೋಗುವ ವೇಳೆ ಸೌಂದರ್ಯ ದುಪ್ಪಟ್ಟು ಮಾಡಲು ಈ ‘ಫೇಶಿಯಲ್’ ಬೆಸ್ಟ್

ಪಾರ್ಟಿ ಅಥವಾ ಮದುವೆಗೆ ಹೋಗುವಾಗ ಹುಡುಗಿಯರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ತಾರೆ. ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸ್ತಾರೆ. ಕೆಲಸಕ್ಕೆ ಹೋಗುವ ಹುಡುಗಿಯರಿಗೆ ಸಾಕಷ್ಟು ಸಮಯ ಸಿಗೋದಿಲ್ಲ. ಕೆಲವೊಮ್ಮೆ ಕಚೇರಿಯಿಂದ ಮದುವೆಗೆ ಹೋಗುವ ಸಂದರ್ಭ ಬರುತ್ತೆ. ಈ ವೇಳೆ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ.

ಒಂದು ವೇಳೆ ನೀವೂ ಕಚೇರಿಯಿಂದ ಮದುವೆ, ಸಮಾರಂಭಕ್ಕೆ ಹೋಗುವವರಾಗಿದ್ದರೆ ಸರಳ ಉಪಾಯದ ಮೂಲಕ ಸೌಂದರ್ಯವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು.

ಸಿಂಪಲ್ ಫೇಶಿಯಲ್ ನಿಮ್ಮ ಸೌಂದರ್ಯ ಹೆಚ್ಚಿಸಲು ನೆರವಾಗುತ್ತದೆ.

ಫೇಶಿಯಲ್ ಗೆ ಬೇಕಾಗುವ ಸಾಮಗ್ರಿ : 2 ಚಮಚ ಜೇನುತುಪ್ಪ, 2 ಚಮಚ ಕಿತ್ತಳೆ ರಸ, ಒಂದು ಚಮಚ ಸಕ್ಕರೆ, ಎರಡು ಚಮಚ ನಿಂಬೆ ರಸ.

ನಿಮಿಷದಲ್ಲಿ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸುವ ಜೇನುತುಪ್ಪ, ನಿಂಬು ರಸ, ಕಿತ್ತಳೆ ಹಣ್ಣಿನ ರಸ, ಸಕ್ಕರೆಯನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ. ಮುಖವನ್ನು ಸ್ವಚ್ಛವಾಗಿ ತೊಳೆದು ಮುಖಕ್ಕೆ ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ಕೈನಿಂದ ಮೃದುವಾಗಿ ಮಸಾಜ್ ಮಾಡಿ. 10 ನಿಮಿಷ ಬಿಟ್ಟು ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಕೆಲವೇ ನಿಮಿಷದಲ್ಲಿ ನಿಮ್ಮ ಮುಖ ಹೊಳಪು ಪಡೆಯಲಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read