ಬೋಳು ತಲೆಗೆ ಕಾರಣವಾಗುತ್ತೆ ಈ ಪಾನೀಯ….!

ಕಾಲಕ್ಕೆ ತಕ್ಕಂತೆ ಜನರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಪರಿಣಾಮ ಕೂದಲು ಉದುರುವಿಕೆ, ಬೊಕ್ಕತಲೆಯಂತಹ ಅನೇಕ ಸಮಸ್ಯೆಗಳು ಯುವಜನತೆಯಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಇದರ ಹಿಂದಿರುವ ಕಾರಣಗಳು ನಿಜಕ್ಕೂ ಆಶ್ಚರ್ಯಕರವಾಗಿವೆ.

ಆಹಾರ ಪದ್ಧತಿಯಲ್ಲಿ ಬದಲಾವಣೆ, ತಡರಾತ್ರಿಯವರೆಗೆ ಕೆಲಸ ಮಾಡುವುದು, ಗಂಟೆಗಟ್ಟಲೆ ಮೊಬೈಲ್ ಫೋನ್ ವೀಕ್ಷಣೆ, ಕಂಪ್ಯೂಟರ್‌ನಲ್ಲಿ ಕೆಲಸ ಇವೆಲ್ಲವೂ ಕೂದಲು ಉದುರುವಿಕೆಗೆ ಪರೋಕ್ಷ ಕಾರಣಗಳು. ಆದರೆ ಸೋಡಾ ಬೆರೆಸಿದ ಪಾನೀಯ ಕೂಡ ಬೋಳುತಲೆಗೆ ಕಾರಣವಾಗ್ತಿದೆ ಅನ್ನೋ ಅಂಶವೀಗ ಬಹಿರಂಗವಾಗಿದೆ.

ತಲೆ ಬೋಳಾಗಲು ಕಾರಣವೇನು ?

ಸಂಶೋಧನೆಯೊಂದರಲ್ಲಿ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಆಹಾರದಲ್ಲಿ ಅಡುಗೆ ಸೋಡಾವನ್ನು ಅತಿಯಾಗಿ ಬಳಸುವುದರಿಂದ ಪುರುಷರಲ್ಲಿ ಬೋಳುತಲೆಯ ಸಮಸ್ಯೆ ಹೆಚ್ಚಾಗುತ್ತಿದೆಯಂತೆ. ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂಬುದು ಸಮಾಧಾನದ ಸಂಗತಿ. ಅದಕ್ಕಾಗಿ ಸೋಡಾ ಬಳಕೆಯನ್ನು ಕಡಿಮೆ ಮಾಡಬೇಕು.

ಯಾರಿಗೆ ಹೆಚ್ಚು ಅಪಾಯ ?

ಪುರುಷರಲ್ಲಿ ಕೂದಲು ಉದುರುವ ಅಪಾಯವು ಶೇ.57 ರಷ್ಟು ಹೆಚ್ಚು ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ವಾಸ್ತವವಾಗಿ ಸಂಶೋಧಕರು 18 ರಿಂದ 45 ವರ್ಷ ವಯಸ್ಸಿನ 1000 ಕ್ಕೂ ಹೆಚ್ಚು ಆರೋಗ್ಯವಂತ ಪುರುಷರ ಮೇಲೆ ಈ ಅಧ್ಯಯನವನ್ನು ಮಾಡಿದ್ದಾರೆ. ಇವರೆಲ್ಲ ಪುರುಷರು ದಿನಕ್ಕೆ ಒಮ್ಮೆಯಾದರೂ ಸೋಡಾ ಕುಡಿಯುತ್ತಿದ್ದರು. ಹಾಗಾಗಿಯೇ ಅವರಿಗೆ ಕೂದಲು ಹೆಚ್ಚು ಉದುರಿದೆ.

ಸೋಡಾ ಕುಡಿಯುವುದು ಏಕೆ ಹಾನಿಕಾರಕ?

ಸೋಡಾ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂಬುದು ಈ ಸಂಶೋಧನೆಯಲ್ಲಿ ತಿಳಿದುಬಂದಿದೆ. ವಾರಕ್ಕೊಮ್ಮೆ ಸೋಡಾ ಕುಡಿಯುವ ಪುರುಷರಿಗೆ ಕೂದಲು ಉದುರುವ ಅಪಾಯವು ಶೇ.21 ರಷ್ಟು ಹೆಚ್ಚು. ಮತ್ತೊಂದೆಡೆ ವಾರಕ್ಕೆ ಎರಡರಿಂದ ನಾಲ್ಕು ಬಾರಿ ಸೋಡಾವನ್ನು ಸೇವಿಸಿದರೆ, ಈ ಅಪಾಯವು 26 ಪ್ರತಿಶತದಷ್ಟಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read