ವಿಡಿಯೋ: ಮದುವೆ ಮನೆಯಲ್ಲಿ ದೇಸೀ ಅಂಕಲ್‌ ಭರ್ಜರಿ ಕುಣಿತ

ಉತ್ತರ ಭಾರತದ ಮದುವೆಗಳಲ್ಲಿ ದೇಸೀ ಅಂಕಲ್-ಆಂಟಿಗಳ ಡ್ಯಾನ್ಸ್‌ ಮಾಮೂಲಿ ಎನ್ನುವಂತಾಗಿದೆ. ಆದರೆ ಈ ಅಂಕಲ್ ಮಾತ್ರ ಸೋಲೋ ಡ್ಯಾನ್ಸ್‌ ಅನ್ನು ಬೇರೆಯದ್ದೇ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಸೆರೆ ಹಿಡಿಯಲಾದ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಭಾರೀ ನಾಜೂಕಾಗಿ ದೇಹವನ್ನು ಕುಣಿಸುತ್ತಿರುವ ಈ ದೇಸೀ ಅಂಕಲ್ ಸಾಂಪ್ರದಾಯಿಕ ಕುರ್ತಾ ಧರಿಸಿಕೊಂಡು ಐಶ್ವರ್ಯಾ ರೈರ ದಿಲ್‌ ಕಾ ರಿಶ್ತಾ ಚಿತ್ರದ ದಾಯಾ ದಾಯಾ ದಾಯಾ ರೇ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.

ಹಾಡಿನ ಲಿರಿಕ್ಸ್‌ಗೆ ತುಟಿಗಳನ್ನು ಸಿಂಕ್ ಮಾಡುತ್ತಿರುವ ಈತ ಸಭಿಕರಿಂದ ಭಾರೀ ಕರತಾಡನಗಳಿಗೆ ಪಾತ್ರರಾಗಿದ್ದಾರೆ. ಮುಖಭಾವಗಳಿಂದ ಹಿಡಿದು, ಚಾರ್ಮಿಂಗ್ ಮೂವ್‌ಗಳು ಸೇರಿದಂತೆ ನೆರೆದಿದ್ದ ಜನರನ್ನು ರಂಜಿಸಲು ಬೇಕಾದ ಎಲ್ಲ ಅಂಶಗಳು ಆತನ ಕುಣಿತದಲ್ಲಿದ್ದವು.

ಮೂರು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದಿರುವ ಈ ವಿಡಿಯೋ ಫೋಟೋ ಶೆರಿಂಗ್ ಅಪ್ಲಿಕೇಶನ್‌ನಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಇಲ್ಲಿ ನೋಡಿ ಆನಂದಿಸಿ.

https://youtu.be/22xcaJ8qKN0

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read