ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಈ ಚಮತ್ಕಾರಿ ಎಲೆ

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅನೇಕ ವಿಧಾನಗಳನ್ನು ಹೇಳಲಾಗಿದೆ. ಆದ್ರೆ ಅಮೃತ ಬಳ್ಳಿ ನಿಮ್ಮ ರೋಗ ನಿರೋಧ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಮೃತ ಬಳ್ಳಿ ಎಲೆಗಳ ರಸವನ್ನು ಕುಡಿಯುತ್ತ ಬಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ದೇಹಕ್ಕೆ ಹಾನಿಯುಂಟು ಮಾಡುವ ವೈರಸ್, ಸೋಂಕುಗಳು ಇದ್ರಿಂದ ನಾಶವಾಗುತ್ತದೆ. ಎಲೆಯಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ರಂಜಕ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದರ ಕಾಂಡಗಳಲ್ಲಿ ಉತ್ತಮ ಪ್ರಮಾಣದ ಪಿಷ್ಟವಿದೆ.

ರಕ್ತ ಹೀನತೆಯಿಂದ ಬಳಲುವವರು ಅಮೃತ ಬಳ್ಳಿ ಎಲೆಯನ್ನು ಬಳಸುವುದು ಉತ್ತಮ. ತುಪ್ಪ ಹಾಗೂ ಜೇನುತುಪ್ಪದ ಜೊತೆ ಬೆರೆಸಿ ಸೇವನೆ ಮಾಡುವುದರಿಂದ ರಕ್ತ ಹೀನತೆ ಕಡಿಮೆಯಾಗುತ್ತದೆ. ಕಾಮಾಲೆ ರೋಗಿಗಳಿಗೂ ಇದ್ರಿಂದ ಸಾಕಷ್ಟು ಪ್ರಯೋಜನವಿದೆ. ಕೆಲವರು ಎಲೆಯನ್ನು ಕುದಿಸಿ ಕುಡಿಯುತ್ತಾರೆ. ಇದನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದಲ್ಲಿ ಬೆರೆಸಿ ಕುಡಿಯಬಹುದು.

ಕಾಲು, ಕೈ ಉರಿ ಎನ್ನುವವರು ಅಮೃತಬಳ್ಳಿ ಎಲೆಗಳನ್ನು ಪುಡಿ ಮಾಡಿ ಅದನ್ನು ಬೆಳಿಗ್ಗೆ ಸಂಜೆ ಪಾದಕ್ಕೆ ಹಚ್ಚುತ್ತ ಬರಬೇಕು. ಎಲೆಗಳ ಕಷಾಯ ಕುಡಿಯುವುದು ಕೂಡ ಪ್ರಯೋಜನಕಾರಿ. ಹೊಟ್ಟೆ ಸಮಸ್ಯೆಯಿರುವವರು ಕಷಾಯ ಕುಡಿಯಬೇಕು. ಮಲಬದ್ಧತೆ, ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜ್ವರದಿಂದ ಬಳಲುವವರು ಇದ್ರ ಕಷಾಯ ಕುಡಿಯುವುದ್ರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read