ಪ್ರತಿದಿನ ಕ್ಯಾರೆಟ್‌ ಜ್ಯೂಸ್‌ ಸೇವಿಸುವುದರಿಂದ ಸಿಗುತ್ತೆ ಈ ಪ್ರಯೋಜನ

ಆರೋಗ್ಯಕರ ಜೀವನ ನಡೆಸಬೇಕೆಂದರೆ ನಾವು ಸೇವಿಸುವ ಆಹಾರ ಸರಿಯಾಗಿರಬೇಕು. ಕ್ಯಾರೆಟ್ ಕೂಡ ಆರೋಗ್ಯಕರವಾದ ಆಹಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕ್ಯಾರೆಟ್‌ ಅನ್ನು ಹಲವು ವಿಧಗಳಲ್ಲಿ ಬಳಸಬಹುದು. ಕ್ಯಾರೆಟ್ ಪುಡಿಂಗ್, ಸಲಾಡ್ ಅಂತೂ ಸಾಕಷ್ಟು ಪ್ರಸಿದ್ಧವಾಗಿದೆ.

ಕ್ಯಾರೆಟ್‌ ಜ್ಯೂಸ್‌ ಅಂತೂ ಬಹುಉಪಯೋಗಿ. ಕ್ಯಾರೆಟ್‌ನಲ್ಲಿ ಪೋಷಕಾಂಶಗಳ ಕೊರತೆಯಿಲ್ಲ. ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಅನೇಕ ಖನಿಜಾಂಶಗಳು ಇದರಲ್ಲಿ ಕಂಡುಬರುತ್ತವೆ. ಆದರೆ ಕ್ಯಾರೆಟ್ ಹಲ್ವಾಕ್ಕೆ ನಾವು ಸಕ್ಕರೆ ಮತ್ತು ಅಡುಗೆ ಎಣ್ಣೆಯನ್ನು ಹೆಚ್ಚಾಗಿ ಬಳಸುವುದರಿಂದ ಅದನ್ನು ಸೇವಿಸುವುದು ಹೆಚ್ಚು ಸೂಕ್ತವಲ್ಲ. ಕ್ಯಾರೆಟ್‌ ಸಲಾಡ್‌ ಮತ್ತು ಜ್ಯೂಸ್‌ ಅನ್ನು ನಿಸ್ಸಂದೇಹವಾಗಿ ಸೇವನೆ ಮಾಡಬಹುದು. ಅದರ ಪರಿಣಾಮ ಕೂಡ ಶೀಘ್ರದಲ್ಲೇ ಗೋಚರಿಸುತ್ತದೆ.

ನಿಯಮಿತವಾಗಿ ಕ್ಯಾರೆಟ್ ಜ್ಯೂಸ್ ಕುಡಿಯುತ್ತಿದ್ದರೆ ಮುಖದಲ್ಲಿ ಅದ್ಭುತವಾದ ಹೊಳಪನ್ನು ಪಡೆಯುತ್ತೀರಿ. ಕ್ಯಾರೆಟ್ ನಮ್ಮ ರಕ್ತದಲ್ಲಿನ ವಿಷದ ಅಂಶವನ್ನು ಕಡಿಮೆ ಮಾಡುತ್ತದೆ. ಮುಖದ ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.  ನೀವು ಮೊಡವೆಗಳಿಂದ ತೊಂದರೆಗೊಳಗಾಗಿದ್ದರೆ, ಕ್ಯಾರೆಟ್ ಜ್ಯೂಸ್ ನಿಮಗೆ ರಾಮಬಾಣ. ಮೊಡವೆಯ ಕಲೆಗಳನ್ನು ಕೂಡ ಇದು ತೊಡೆದು ಹಾಕುತ್ತದೆ. ನಿಯಮಿತವಾಗಿ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ ಮತ್ತು ಹೆಚ್ಚು ಸುಸ್ತಾಗುವುದಿಲ್ಲ.

ಒಸಡುಗಳಲ್ಲಿ ರಕ್ತಸ್ರಾವ ಇರುವವರು ಕ್ಯಾರೆಟ್ ಜ್ಯೂಸ್ ಕುಡಿಯಬೇಕು. ಇದು ಹಲ್ಲುಗಳ ಹೊಳಪನ್ನು ಕೂಡ ಹೆಚ್ಚಿಸುತ್ತದೆ.ಕೆಮ್ಮಿಗೆ ಕೂಡ ಇದು ಪರಿಹಾರ ನೀಡಬಲ್ಲದು. ಕ್ಯಾರೆಟ್ ರಸಕ್ಕೆ ಕಾಳುಮೆಣಸಿನ ಪುಡಿ ಮತ್ತು ಕಲ್ಲು ಸಕ್ಕರೆ ಬೆರೆಸಿಕೊಂಡು ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ. ಕ್ಯಾರೆಟ್‌ನಲ್ಲಿ ಫೈಬರ್‌ನಂತಹ ಪ್ರಮುಖ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದಾಗಿ ತೂಕ  ಕಳೆದುಕೊಳ್ಳುವುದು ಸುಲಭವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read