ಆರು ದಿನ ಉಸಿರಾಡದೆ ಇರುತ್ತೆ ಈ ಪ್ರಾಣಿ: ವರ್ಷಪೂರ್ತಿ ಆಹಾರ ಬೇಡ

ಹೆಚ್ಚಿನ ಜನರು ಬಹುಶಃ ಎರಡು ನಿಮಿಷಗಳ ಕಾಲ ತಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳೋದು ಕಷ್ಟ. ಆದ್ರೆ ಅನೇಕ ಪ್ರಾಣಿಗಳು ತಮ್ಮ ಉಸಿರನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿರುತ್ತವೆ. ಆದ್ರೆ ಉಸಿರಾಡದೆ ಆರು ದಿನ ಬದುಕಬಲ್ಲ ಜೀವಿ ಇದೆ ಅಂದ್ರೆ ನಂಬ್ತೀರಾ?

ವರದಿಗಳ ಪ್ರಕಾರ, ಚೇಳು, ಉಸಿರಾಡದೆ ಆರು ದಿನ ಇರಬಲ್ಲದು. ಚೇಳಿನ ಶ್ವಾಸಕೋಶದ ರಚನೆಯು ದೀರ್ಘಕಾಲದವರೆಗೆ ತನ್ನ ಉಸಿರನ್ನು ಹಿಡಿದಿಟ್ಟುಕೊಳ್ಳುತ್ತದೆ. ಏಕೆಂದರೆ ಅದಕ್ಕೆ ವಿಶೇಷ ರೀತಿಯ ಶ್ವಾಸಕೋಶವಿದೆ. ಅದನ್ನು ಬುಕ್‌ ಲಂಗ್ಸ್‌ ಎಂದು ಕರೆಯಲಾಗುತ್ತದೆ. ಇದು ಹೆಚ್ಚಿನ ಅರಾಕ್ನಿಡ್‌ಗಳಲ್ಲಿ  ಜೇಡಗಳು ಮತ್ತು ಚೇಳುಗಳಲ್ಲಿ ಮುಖ್ಯ ಉಸಿರಾಟದ ಅಂಗವಾಗಿದೆ. ಬುಕ್‌ ಲಂಗ್ಸ್‌ ಅರಾಕ್ನಿಡ್‌ನ ಹೊಟ್ಟೆಯಲ್ಲಿ ಸಣ್ಣ ದ್ವಾರಗಳಲ್ಲಿವೆ. ಹಾಗಾಗಿ ಚೇಳುಗಳು ತಮ್ಮ ಶ್ವಾಸಕೋಶದಲ್ಲಿ ಉತ್ತಮ ಪ್ರಮಾಣದ ಗಾಳಿಯನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದ್ರಿಂದ ಅವು ಗಾಳಿಯಲ್ಲಿ ಉಸಿರಾಡದೆ 6 ದಿನಗಳವರೆಗೆ ಬದುಕಬಲ್ಲರು.

FactbyScience ಹೆಸರಿನ ಇನ್ಸ್ಟಾಗ್ರಾಮ್‌ ಪುಟವು ಚೇಳಿನ ಫೋಟೋವನ್ನು ಹಂಚಿಕೊಂಡಿದೆ ಮತ್ತು ಚೇಳು 6 ದಿನಗಳವರೆಗೆ ತನ್ನ ಉಸಿರನ್ನು ಹಿಡಿದಿಟ್ಟುಕೊಳ್ಳುತ್ತದೆ, ಆಹಾರವಿಲ್ಲದೆ ಇಡೀ ವರ್ಷ ಬದುಕಬಲ್ಲದು ಎಂದು ಬರೆದಿದೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ. ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read