ಬಿಳಿ ಕೂದಲು ಕಪ್ಪಗಾಗಿಸಲು ಸಹಾಯಕ ಈ ಸೊಪ್ಪು; ತಲೆಹೊಟ್ಟು ಸಮಸ್ಯೆಗೂ ನೀಡುತ್ತೆ ಪರಿಹಾರ……!

ಪುಟ್ಟ ಪುಟ್ಟ ಮಕ್ಕಳಿಗೂ ಈಗ ಬಿಳಿ ಕೂದಲಿನ ಸಮಸ್ಯೆ ಶುರುವಾಗಿದೆ. ಬಿಳಿ ಕೂದಲು ಕಾಣಿಸಿಕೊಂಡಾಕ್ಷಣ ಹೇರ್‌ ಡೈ ಮಾಡುವುದು ಅಥವಾ ಇತರ ಉತ್ಪನ್ನಗಳನ್ನು ಬಳಸಬೇಡಿ. ಇದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಅಕಾಲಿಕವಾಗಿ ಕೂದಲು ಬೆಳ್ಳಗಾದರೆ ಕರಿಬೇವನ್ನು ಬಳಸಿದ್ರೆ ಉತ್ತಮ ಫಲಿತಾಂಶ ಸಿಗುತ್ತದೆ.

ಕರಿಬೇವು ಕೂದಲನ್ನು ಬಲಪಡಿಸಲು ತುಂಬಾ ಉಪಯುಕ್ತವಾಗಿದೆ. ಕೂದಲು ಮೃದುವಾಗಿ ಹೊಳಪು ಪಡೆಯುತ್ತದೆ. ಕರಿಬೇವಿನ ಎಲೆಗಳಲ್ಲಿ ಉತ್ಕರ್ಷಣ ನಿರೋಧಕ ಗುಣವಿದೆ. ಹಾಗಾಗಿ ಇದು ಬಿಳಿ ಕೂದಲನ್ನು ಕಪ್ಪಗಾಗಿಸುತ್ತದೆ.

ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಹಾಕಿ 20 ನಿಮಿಷಗಳ ಕಾಲ ಕುದಿಸಿ. ನಂತರ ಆ ನೀರಿನಿಂದ ಪ್ರತಿದಿನ ಕೂದಲಿನ ಬುಡಕ್ಕೆ ಹಾಗೂ ಕೂದಲಿಗೆ ಚೆನ್ನಾಗಿ ಮಸಾಜ್‌ ಮಾಡಬೇಕು.

ಕರಿಬೇವಿನಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ಫಂಗಲ್ ಗುಣಗಳಿರುವುದರಿಂದ ನೆತ್ತಿಯ ಆರೋಗ್ಯಕ್ಕೂ ಇದು ಒಳ್ಳೆಯದು. ಡ್ಯಾಂಡ್ರಫ್ ಸಮಸ್ಯೆಗೆ ಕೂಡ ಕರಿಬೇವು ಪರಿಹಾರ ನೀಡುತ್ತದೆ. ಇದಲ್ಲದೆ ಕೂದಲು ಹೆಚ್ಚು ಉದುರ್ತಾ ಇದ್ದರೆ ಅಂಥವರು ಕೂಡ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ. ಕರಿಬೇವು ಕೂದಲಿನ ಸಂಪೂರ್ಣ ಆರೈಕೆ ಮಾಡುವುದರಿಂದ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದು ಎನಿಸಿಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read