49 ನೇ ವಯಸ್ಸಿನಲ್ಲಿ ಸಂಪೂರ್ಣ ಫಿಟ್ ಆಗಿದ್ದಾರೆ ಈ ನಟಿ; ಸ್ಟೈಲಿಶ್‌ ಲುಕ್‌ ನೋಡಿ ದಂಗಾದ ಅಭಿಮಾನಿಗಳು…!

ಬಾಲಿವುಡ್‌ ನಟಿ ರವೀನಾ ಟಂಡನ್ ಅವರ ವಯಸ್ಸು ಎಷ್ಟು ಅನ್ನೋದನ್ನು ಗೆಸ್‌ ಮಾಡೋದು ಅಸಾಧ್ಯ. ರವೀನಾರ ಪರ್ಫೆಕ್ಟ್‌ ಫಿಗರ್‌ ನೋಡಿದವರೆಲ್ಲ ವಯಸ್ಸು ಮೂವತ್ತು ದಾಟಿಲ್ಲ ಎಂದುಕೊಳ್ತಾರೆ. ಆದರೆ ರವೀನಾಗೆ ಈಗ 49ರ ಹರೆಯ. ಸೌಂದರ್ಯದ ವಿಷಯದಲ್ಲಿ ತನಗಿಂತ ಕಿರಿಯ ನಾಯಕಿಯರಿಗಿಂತ ಕಮ್ಮಿಯೇನಿಲ್ಲ ಈ ನಟಿ. ಅಷ್ಟರಮಟ್ಟಿಗೆ ಫಿಟ್ನೆಸ್‌ ಅನ್ನು ಕೂಡ ಕಾಪಾಡಿಕೊಂಡಿದ್ದಾರೆ. ಸ್ಟೈಲಿಶ್‌ ಲುಕ್‌ ಹಾಗೂ ಫಿಟ್‌ ಆಗಿರೋ ದೇಹಸಿರಿಯ ಮೂಲಕ ರವೀನಾ ಗಮನ ಸೆಳೆಯುತ್ತಾರೆ.

ರವೀನಾ ಟಂಡನ್‌ರ ಏರ್‌ಪೋರ್ಟ್‌ ಲುಕ್‌ಗಳಂತೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಕ್ಯಾಶುಯಲ್ ಲುಕ್‌ನಲ್ಲಿ ತುಂಬಾ ಸ್ಟೈಲಿಶ್ ಮತ್ತು ಗ್ಲಾಮರಸ್ ಆಗಿ ಕಾಣ್ತಾರೆ ಈ ನಟಿ. ಕ್ಯಾಮರಾ ನೋಡಿದ ತಕ್ಷಣ ಕಿಲ್ಲರ್ ಪೋಸ್ಗಳನ್ನೂ ಕೊಟ್ಟಿದ್ದಾರೆ.

ಕಪ್ಪನೆಯ ವನ್‌ ಪೀಸ್‌ ಡ್ರೆಸ್‌, ನ್ಯೂಡ್ ಮೇಕಪ್, ನೀಲಿ ಬಣ್ಣದ ಕನ್ನಡಕ, ಬಿಳಿ ಬಣ್ಣದ ಸ್ನೀಕರ್ಸ್ ಧರಿಸಿದ್ದ ರವೀನಾ ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ರವೀನಾ ಅಭಿಮಾನಿಗಳು ಈ ಲುಕ್ ಅನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ವರ್ಷ ಜುಲೈನಲ್ಲಿ ಬಿಡುಗಡೆಯಾದ ‘ವನ್‌ ಫ್ರೈಡೆ ನೈಟ್‌’ ಚಿತ್ರದಲ್ಲಿ ರವೀನಾ ಕಾಣಿಸಿಕೊಂಡಿದ್ದರು. ‘ಕೆಜಿಎಫ್ ಚಾಪ್ಟರ್ 2’ ಸಿನೆಮಾದಲ್ಲಿ ಕೂಡ ರವೀನಾ ಗಮನಸೆಳೆದಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read