ಅಮಿತಾಭ್ ಮುಂದೆ ಕತ್ರಿನಾಗೆ ಮುತ್ತಿಡಲು ನಡುಗಿದ್ದ ಗುಲ್ಶನ್ ಗ್ರೋವರ್; ದೃಶ್ಯದ ನೆನಪುಗಳನ್ನು ಹಂಚಿಕೊಂಡ ನಟ

ಬಾಲಿವುಡ್‌ನ ಖ್ಯಾತ ಖಳನಟ ಗುಲ್ಶನ್ ಗ್ರೋವರ್ ಅವರು ಕತ್ರಿನಾ ಕೈಫ್‌ಗೆ ಮುತ್ತು ನೀಡುವ ದೃಶ್ಯದ ಬಗ್ಗೆ ಹಂಚಿಕೊಂಡಿರುವ ನೆನಪುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ‘ಬೂಮ್’ ಚಿತ್ರದ ಮುತ್ತಿನ ದೃಶ್ಯದಲ್ಲಿ ನಟಿಸುವಾಗ ತಾವು ಎದುರಿಸಿದ ಕಷ್ಟಗಳನ್ನು ಗುಲ್ಶನ್ ಗ್ರೋವರ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

“ಕತ್ರಿನಾ ಕೈಫ್‌ಗೆ ಮುತ್ತು ನೀಡುವ ದೃಶ್ಯ ನನಗೆ ತುಂಬಾ ಕಷ್ಟಕರವಾಗಿತ್ತು. ಅದಕ್ಕೆ ಮುಖ್ಯ ಕಾರಣ ಅಮಿತಾಭ್ ಬಚ್ಚನ್ ಅವರ ಮುಂದೆ ಈ ದೃಶ್ಯದಲ್ಲಿ ನಟಿಸಬೇಕಿತ್ತು. ಅಲ್ಲದೆ ಕತ್ರಿನಾ ಕೈಫ್ ಆಗ ತಾನೇ ಚಿತ್ರರಂಗಕ್ಕೆ ಬಂದಿದ್ದರು. ಹೀಗಾಗಿ ಅವರಿಗೂ ಈ ದೃಶ್ಯದಲ್ಲಿ ನಟಿಸಲು ಆರಾಮದಾಯಕ ಅನಿಸುತ್ತಿರಲಿಲ್ಲ. ನನಗೂ ಏನಾದ್ರೂ ತಪ್ಪಾಗಿಬಿಡುತ್ತಾ ಎಂಬ ಭಯವಿತ್ತು. ಆದ್ರೆ, ನಾವು ಈ ದೃಶ್ಯದಲ್ಲಿ ನಟಿಸುವಾಗ, ಮುತ್ತಿನ ದೃಶ್ಯವನ್ನು ಅಭ್ಯಾಸ ಮಾಡುವಾಗ, ಬಚ್ಚನ್ ಸಾಹೇಬರು ಇದ್ದಕ್ಕಿದ್ದಂತೆ ಅಲ್ಲಿಗೆ ಬಂದರು. ಅವರನ್ನು ನೋಡಿದ ನಂತರ ನಮ್ಮ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಆದರೆ ಅವರು ನಮ್ಮನ್ನು ಹುರಿದುಂಬಿಸಿದರು ಮತ್ತು ಅಲ್ಲಿಂದ ಹೊರಟು ಹೋದರು” ಎಂದು ಗುಲ್ಶನ್ ಗ್ರೋವರ್ ನೆನಪಿಸಿಕೊಂಡಿದ್ದಾರೆ.

‘ಬೂಮ್’ ಚಿತ್ರವು 2003ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಕೂಡ ನಟಿಸಿದ್ದರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಆದರೆ, ಚಿತ್ರ ಬಿಡುಗಡೆಯಾದ ವರ್ಷಗಳ ನಂತರ, ಗುಲ್ಶನ್ ಗ್ರೋವರ್ ಸಂದರ್ಶನವೊಂದರಲ್ಲಿ ಕತ್ರಿನಾ ಕೈಫ್‌ಗೆ ಮುತ್ತು ನೀಡುವ ದೃಶ್ಯದ ಬಗ್ಗೆ ಮಾತನಾಡಿದ್ದರು.

ಕತ್ರಿನಾ ಕೈಫ್ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡು ಸಾಕಷ್ಟು ಖ್ಯಾತಿ ಗಳಿಸಿದ ನಂತರ, ಅವರ ‘ಬೂಮ್’ ಚಿತ್ರದ ಮುತ್ತಿನ ದೃಶ್ಯವು ಮತ್ತೆ ಸುದ್ದಿಯಾಯಿತು. ಈ ದೃಶ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು. ಕತ್ರಿನಾ ಕೈಫ್ ಅವರಿಂದಲೂ ಈ ದೃಶ್ಯದ ಬಗ್ಗೆ ವಿವರಣೆ ಕೇಳಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read