ಟೊಮೆಟೊ ಬಳಿಕ ದಾಳಿಂಬೆ ತೋಟಕ್ಕೆ ಕಳ್ಳರ ಕಾಟ; ಲಕ್ಷಾಂತರ ರೂಪಾಯಿ ದಾಳಿಂಬೆ ಕದ್ದೊಯ್ದ ಖದೀಮರು

ಚಿಕ್ಕಬಳ್ಳಾಪುರ: ಟೊಮೆಟೊ ಬೆಳೆಗೆ ಬಂಗಾರದ ಬೆಲೆ ಬಂದು ಕೆಲ ದಿನಗಳಿಂದ ಕೊಂಚ ಕುಸಿತ ಕಾಣುತ್ತಿದೆ. ಇದೀಗ ದಾಳಿಂಬೆ ಬೆಲೆ ಗಗನಕ್ಕೇರುತ್ತಿದೆ. ಟೊಮೆಟೊ ಕಳ್ಳತನ ಪ್ರಕರಣದ ಬಳಿಕ ಈಗ ದಾಳೆಂಬೆ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಕಳ್ಳರು ಸಾಮಾನ್ಯವಾಗಿ ಚಿನ್ನಾಭರಣ, ವಾಹನ, ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ಯುತ್ತಾರೆ. ಆದರೆ ಟೊಮೆಟೊ ಬೆಲೆ ಹೆಚ್ಚಳವಾಗುತ್ತಿದ್ದಂತೆ ಕಳ್ಳರು ಟೊಮೆಟೊ ಸಾಗಿಸುತ್ತಿದ್ದ ವಾಹನ, ಟೊಮೆಟೊ ತೋಟಕ್ಕೆ ನುಗ್ಗಿ ಕಳ್ಳತನ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದು ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ದಾಳಿಂಬೆ ತೋಟದಲ್ಲಿಯೂ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ದಾಳಿಂಬೆ ತೋಟಕ್ಕೆ ಕಳ್ಳರ ಕಾಟ ಆರಂಭವಾಗಿದ್ದು, ನಂದಿ ಕ್ರಾಸ್ ಬಳಿ ದಾಳಿಂಬೆ ತೋಟಕ್ಕೆ ನುಗ್ಗಿರುವ ಕಳ್ಳರು ಕಟಾವಿಗೆ ಬಂದಿದ್ದ ದಾಳಿಂಬೆಗಳನ್ನು ಕದ್ದು ಪರಾರಿಯಾಗಿದ್ದಾರೆ.

ರೈತ ಜಗದೀಶ್ ಎಂಬುವವರಿಗೆ ಸೇರಿದ ದಾಳಿಂಬೆ ತೋಟದಲ್ಲಿ ಕಳ್ಳತನವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ದಾಳಿಂಬೆ ಹಣ್ಣನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ರೈತ ದೂರು ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read