ಕಳ್ಳತನ ಮಾಡುವ ಮುನ್ನ ಪಬ್ ನಲ್ಲಿ ಆಹಾರ ಸೇವಿಸಿ ರಿಲ್ಯಾಕ್ಸ್ ಆದ ಕಳ್ಳ; ವಿಡಿಯೋ ವೈರಲ್

ಯುನೈಟೆಡ್ ಕಿಂಗ್ಡಮ್ ನಲ್ಲಿ ನಡೆದಿರುವ ವಿಲಕ್ಷಣ ಕಳ್ಳತನ ಪ್ರಕರಣ ಒಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳ್ಳತನ ಮಾಡುವ ಮುನ್ನ ಚೋರ, ಆರಾಮವಾಗಿ ಆಹಾರ ಸೇವಿಸಿ ಬಳಿಕ ತನ್ನ ಕೃತ್ಯ ಎಸಗಿದ್ದಾನೆ.

ಕಳ್ಳತನ ಮಾಡುವ ಸಲುವಾಗಿ ಈ ಪಬ್ ಗೆ ಬೆಳಗಿನ ಜಾವ 2.13ರ ಸುಮಾರಿಗೆ ಬಂದಿರುವ ಈತ ಸುಸ್ತಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಬಹುಶಃ ಆಹಾರ ಸೇವಿಸಿದ್ದಾನೆ ಎಂದು ಕಾಣುತ್ತದೆ.

ಬಳಿಕ ಕಳ್ಳತನ ಕೃತ್ಯವೆಸಗಿದ್ದು ಪಬ್ ಆಡಳಿತ ಮಂಡಳಿ ಈ ವಿಡಿಯೋ ಹಂಚಿಕೊಂಡ ಬಳಿಕ ಇಲ್ಲಿಗೆ ಪ್ರತಿನಿತ್ಯ ಬರುವವರು ಈತ ಪರಿಚಿತನಂತೆ ಕಾಣುತ್ತಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read