ಪುರುಷರನ್ನು ಅವಮಾನಿಸುವುದೇ ಈಕೆಯ ಕೆಲಸ; ಇದರಿಂದಲೇ ಗಳಿಸ್ತಾಳೆ ಕೋಟಿ ಕೋಟಿ ರೂಪಾಯಿ….!

ಜನರು ಹಣ ಮಾಡಲು ಬೇರೆ ಬೇರೆ ದಾರಿ ಹುಡುಕಿಕೊಳ್ತಿದ್ದಾರೆ. ಬೆವರು ಮಾರಾಟ ಮಾಡಿ, ಬಳಸಿದ ಸಾಕ್ಸ್‌ ಮಾರಿ ಹಣ ಮಾಡುವವರಿದ್ದಾರೆ. ಈಗ ಇಲ್ಲೊಬ್ಬ ಮಹಿಳೆ ಹಣ ಗಳಿಸುವ ವಿಧಾನ ದಂಗಾಗಿಸಿದೆ. ಪುರುಷರನ್ನು ಕೀಳಾಗಿ ನೋಡುವ ಮೂಲಕ ಆಕೆ ಹಣ ಗಳಿಸುತ್ತಿದ್ದಾಳೆ. ವಿಚಿತ್ರ ಅಂದ್ರೆ ಆಕೆ ಕೈ ಕೆಳಗೆ ಆಳಾಗಿ ಕೆಲಸ ಮಾಡುವ ಪುರುಷರೇ ಆಕೆಗೆ ಹಣ ನೀಡ್ತಾರೆ.

ಈ ಮಹಿಳೆ ಹೆಸರು ಮಾರ್ಲಿ. ಅಮೆರಿಕದ ನಿವಾಸಿ. ಮಾರ್ಲಿ ಆರು ವರ್ಷಗಳ ಹಿಂದೆ ತನ್ನ ಈ ಕೆಲಸ ಶುರು ಮಾಡಿದ್ದಾಳೆ. ಪದವಿ ಪಡೆದು  ಕಾರ್ಪೊರೇಟ್ ಉದ್ಯೋಗಿಯಾಗಿ ಕೆಲಸ ಮಾಡಿದ್ರೆ ಶ್ರೀಮಂತೆಯಾಗಲು ಸಾಧ್ಯವಿಲ್ಲ ಎಂಬುದನ್ನು ಅರಿತ ಆಕೆ, ಈ ಕೆಲಸ ಶುರು ಮಾಡಿದಳು. ಆರಂಭದಲ್ಲಿ ಆಕೆಯ ಸೇವೆಗೆ ಬರ್ತಿದ್ದ ಪುರುಷರಿಂದ 1 ಸಾವಿರ ಡಾಲರ್‌ ಪಡೆಯುತ್ತಿದ್ದಳು. ಈಗ ಅದು  208,000 ಡಾಲರ್ ಗೆ ಏರಿದೆ.

ನೂರಾರು ಪುರುಷರು ತಮ್ಮನ್ನು ಅವಮಾನಿಸುವಂತೆ ಮಾರ್ಲಿ ಬಳಿ ಬರ್ತಾರೆ. ಅವರೇ ಹಣ, ಉಡುಗೊರೆ ನೀಡ್ತಾರೆ. ಆರೇ ವರ್ಷದಲ್ಲಿ ಮಾರ್ಲಿ ನಿರೀಕ್ಷೆಗಿಂತ ಹೆಚ್ಚು ಹಣ ಸಂಪಾದನೆ ಮಾಡಿದ್ದಾಳೆ. ಲವ್ ಡೋಂಟ್ ಜಡ್ಜ್‌ ಹೆಸರಿನ ಯುಟ್ಯೂಬ್‌ ಚಾನೆಲ್‌ ಹೊಂದಿರುವ ಈಕೆ ಅಲ್ಲಿ, ಪುರುಷರನ್ನು ಅವಮಾನಿಸುವ ವಿಡಿಯೋ ಹಂಚಿಕೊಳ್ತಾಳೆ.

ಈಕೆಗೆ ಹಣ ನೀಡುವ ಪುರುಷರು, ಆಕೆ ಕಾಲು ನೆಕ್ಕುವುದು, ನಾಯಿಯಂತೆ ವರ್ತಿಸುವುದು, ಚಪ್ಪಲಿ ಕ್ಲೀನ್‌ ಮಾಡೋದು ಸೇರಿದಂತೆ ಆಕೆ ಗುಲಾಮರಂತೆ ಮಾರ್ಲಿ ಹೇಳಿದ್ದೆಲ್ಲ ಮಾಡ್ತಾರೆ. ಅನೇಕರು ಮಾರ್ಲಿ ಕೆಲಸವನ್ನು ವಿರೋಧಿಸಿದ್ರೆ, ಆಕೆ ಸ್ನೇಹಿತ, ಮಾರ್ಲಿ ಸೇವೆ ಮಾಡಿದ ಪುರುಷರು ಮಾನಸಿಕ ನೆಮ್ಮದಿ ಪಡೆದಿದ್ದಾರೆ ಎಂದಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read