RCB ವಿರುದ್ಧ ಬ್ಯಾಟಿಂಗ್ ಗೆ ಇಳಿದ ಧೋನಿ ಪರ ಹರ್ಷೋದ್ಗಾರ; ಅನುಷ್ಕಾ ಶರ್ಮಾ ವಿಸ್ಮಯದ ವಿಡಿಯೋ ವೈರಲ್

ಬೆಂಗಳೂರಿನ ಎಂ.ಎ. ಚಿನ್ನಸ್ವಾಮಿ ಸ್ಟೇಡಿಯಂ ಏಪ್ರಿಲ್ 17ರ ಸೋಮವಾರ RCB vs CSK ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಿತ್ತು.

ಪಂದ್ಯದ ವೇಳೆ ತಮ್ಮ ಪತಿ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸಲು ಅನುಷ್ಕಾ ಶರ್ಮಾ ಹಾಜರಿದ್ದರು.

ಪಂದ್ಯದ ವಿವಿಧ ಹಂತಗಳಲ್ಲಿ ಅನುಷ್ಕಾ ಶರ್ಮಾ ಅವರ ಪ್ರತಿಕ್ರಿಯೆಯನ್ನು ಸೆರೆಹಿಡಿಯುವ ಹಲವಾರು ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗಿವೆ.

ಅದರಲ್ಲಿ ಒಂದು ವಿಡಿಯೊ ಪ್ರಸ್ತುತ ವೈರಲ್ ಆಗುತ್ತಿದೆ. ಚೆನ್ನೈ ತಂಡದ ಮಹೇಂದ್ರ ಸಿಂಗ್ ಧೋನಿ ಕೊನೆಯ ಎರಡು ಬಾಲ್ ಗಳಿದ್ದಾಗ ಬ್ಯಾಟಿಂಗ್‌ಗೆ ಬಂದಾಗ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಮತ್ತು ಧೋನಿ ಪರ ಬೆಂಬಲದ ಕೂಗಿನ ಸದ್ದಿಗೆ ಅನುಷ್ಕಾ ಶರ್ಮ ಪ್ರತಿಕ್ರಿಯಿಸಿರೋ ವಿಡಿಯೋ ವೈರಲ್ ಆಗಿದೆ.

ಪ್ರೇಕ್ಷಕರು ಧೋನಿ ಪರ ಬೆಂಬಲಕ್ಕೆ ನಿಂತ ಪರಿಗೆ ಅಚ್ಚರಿ ಪಟ್ಟ ಅನುಷ್ಕಾ ಶರ್ಮಾ ನಗುತ್ತಾ, ತಮ್ಮ ಪಕ್ಕದಲ್ಲಿದ್ದವರಿಗೆ “ಅವರು ಅವನನ್ನು ಪ್ರೀತಿಸುತ್ತಾರೆ” ಎಂದು ಹೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಒಂದು ಕ್ಷಣ ಅನುಷ್ಕಾ ಶರ್ಮಾ ಸಂಪೂರ್ಣವಾಗಿ ವಿಸ್ಮಯದಿಂದ ಪ್ರೇಕ್ಷಕರ ಗುಂಪಿನ ಪ್ರತಿಕ್ರಿಯೆಯನ್ನು ನೋಡುತ್ತಾ ಎಂಎಸ್ ಧೋನಿಗಾಗಿ ನೆರೆದಿದ್ದ ಪ್ರೇಕ್ಷಕರನ್ನು ನೋಡಿ ನಗುತ್ತಿದ್ದರು.

ಕೆಲವೇ ಕೆಲವು ಸೆಕೆಂಡ್ ಗಳ ಕ್ಲಿಪ್ ವೈರಲ್ ಆಗಿದ್ದು ಧೋನಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸೋಮವಾರ ನಡೆದ ಪಂದ್ಯದಲ್ಲಿ 227 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತು. RCB ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ರನ್ ನಿಂದ ಗೆದ್ದಿತು.

https://twitter.com/cricket_country/status/1648033704277852160?ref_src=twsrc%5Etfw%7Ctwcamp%5Etweetembed%7Ctwterm%5E1648033704277852160%7Ctwgr%5E4d1f577715a5521cfd2253d295cfccd0c281de49%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fdna-epaper-dhc74e1ab8f59547a8a35f29dbe4573ea5%2Ftheylovehimanushkasharmainaweasbengalurucrowdcheersformsdhoniduringrcbvscskmatchwatchviralvideo-newsid-n491203668

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read