ಇಂದಿಗೂ ಜನಪ್ರಿಯವಾಗಿವೆ ಸ್ವಾತಂತ್ರ್ಯ ಪೂರ್ವದಲ್ಲೇ ಮಾರುಕಟ್ಟೆಗೆ ಬಂದಿದ್ದ ಈ ಉತ್ಪನ್ನಗಳು…!

ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಗುವ ಮೊದಲೇ ಅನೇಕ ದೇಶೀಯ ಕಂಪನಿಗಳು ತಮ್ಮ ವಹಿವಾಟನ್ನು ಆರಂಭಿಸಿದ್ದವು. ಇವುಗಳಲ್ಲಿ ಹಲವು ಕಂಪನಿಗಳು ಈಗಲೂ ಸಹ ಜನಪ್ರಿಯವಾಗಿವೆ. ಆ ಕಂಪನಿಗಳ ಉತ್ಪನ್ನಗಳು ಈಗಲೂ ಜನಸಾಮಾನ್ಯರ ಫೇವರಿಟ್‌.

ಬೋರೋಲಿನ್‌ – ಬೊರೊಲಿನ್ ತನ್ನ ವಹಿವಾಟು ಆರಂಭಿಸಿ 94 ವರ್ಷಗಳೇ ಕಳೆದಿವೆ. ಸ್ಪರ್ಧಾತ್ಮಕ ಸೌಂದರ್ಯವರ್ಧಕ ಉತ್ಪನ್ನಗಳ ಪೈಕಿ ಬೊರೋಲಿನ್‌ ಈಗಲೂ ಮುಂಚೂಣಿಯಲ್ಲಿದೆ. ತನ್ನ ಅಸ್ತಿತ್ವವನ್ನು ಕಳೆದುಕೊಂಡಿಲ್ಲ. ಬೊರೊಲಿನ್ ಅನ್ನು ಕೋಲ್ಕತ್ತಾ ಮೂಲದ GD ಫಾರ್ಮಾಸ್ಯುಟಿಕಲ್ಸ್ ತಯಾರಿಸುತ್ತದೆ. ಈ ಉತ್ಪನ್ನವನ್ನು ಸ್ವಾತಂತ್ರ್ಯಕ್ಕೂ ಮೊದಲೇ ಮಾರುಕಟ್ಟೆಗೆ ತರಲಾಗಿತ್ತು.

ರೂಹ್ ಅಫ್ಜಾ ಇದು ಕೂಡ ಸ್ವಾತಂತ್ರ್ಯಪೂರ್ವದಲ್ಲೇ ಅಸ್ತಿತ್ವದಲ್ಲಿದ್ದ ಬ್ರಾಂಡ್‌. ಶಾಖದಿಂದ ಪರಿಹಾರ ಪಡೆಯಲೆಂದೇ ತಯಾರಿಸಲಾದ ಗಿಡಮೂಲಿಕೆಗಳ ಮಿಶ್ರಣ. ನಂತರ ಪ್ರಮುಖ ಉತ್ಪನ್ನವಾಗಿ ಹೆಸರುವಾಸಿಯಾಗಿದೆ. ರೂಹ್ ಅಫ್ಜಾವನ್ನು 1907 ರಲ್ಲಿ ಹಕೀಮ್ ಹಫೀಜ್ ಅಬ್ದುಲ್ ಮಜೀದ್ ಅವರು ಪ್ರಾರಂಭಿಸಿದರು.  

ಮೈಸೂರು ಸ್ಯಾಂಡಲ್ ಸೋಪ್ ಅನೇಕ ಸಾಬೂನಿನ ಬ್ರ್ಯಾಂಡ್‌ಗಳು ಸ್ವಾತಂತ್ರ್ಯಪೂರ್ವದಲ್ಲೇ ಹುಟ್ಟಿಕೊಂಡಿವೆ. ಅವುಗಳಲ್ಲಿ ಮೈಸೂರು ಸ್ಯಾಂಡಲ್ ಸೋಪು ಕೂಡ ಒಂದು. 1916 ರಲ್ಲಿ ಮೈಸೂರಿನ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಬೆಂಗಳೂರಿನಲ್ಲಿ ಸರ್ಕಾರಿ ಸಾಬೂನು ಕಾರ್ಖಾನೆಯನ್ನು ಸ್ಥಾಪಿಸಿದರು. ಆಗಿನಿಂದಲೂ ಮೈಸೂರ್‌ ಸ್ಯಾಂಡಲ್‌ ಸೋಪ್‌ ಅಸ್ತಿತ್ವದಲ್ಲಿದೆ.

ಪಾರ್ಲೆ ಜಿ ಮಕ್ಕಳ ನೆಚ್ಚಿನ ಬಿಸ್ಕೆಟ್‌ ಪಾರ್ಲೆಜಿ. ಇಂದಿಗೂ ಇದನ್ನು ಸಾಕಷ್ಟು ಜನರು ಬಳಸುತ್ತಾರೆ. ಪಾರ್ಲೆ ಹೌಸ್ ಅನ್ನು 1928 ರಲ್ಲಿ ಮೋಹನ್ ಲಾಲ್ ದಯಾಳ್ ಸ್ಥಾಪಿಸಿದರು. 1939 ರಿಂದಲೂ ಪಾರ್ಲೆ-ಜಿ ಬಿಸ್ಕತ್ತುಗಳನ್ನು ತಯಾರಿಸಲಾಗುತ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read