ಬೇಸಿಗೆಯಲ್ಲಿ ಬೊಜ್ಜು ಮತ್ತು ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸುತ್ತವೆ ಈ ಪದಾರ್ಥಗಳು

ಬೇಸಿಗೆಯಲ್ಲಿ ತೂಕ ನಿಯಂತ್ರಣದಲ್ಲಿಡುವುದು ಮತ್ತು ಮತ್ತು ತ್ವಚೆಯನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಕಷ್ಟ. ತೂಕ ಇಳಿಸುವ ಪ್ರಯತ್ನದಲ್ಲಿರುವವರು ಬೇಸಿಗೆಯಲ್ಲಿ ನಿರ್ದಿಷ್ಟವಾದ ಕೆಲವು ಪದಾರ್ಥಗಳನ್ನು ಸೇವನೆ ಮಾಡಬೇಕು. ಅದು ಚರ್ಮವನ್ನು ಸಹ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

ಇವುಗಳಲ್ಲಿ ಕಲ್ಲಂಗಡಿ ಸಲಾಡ್, ಸೌತೆಕಾಯಿ ಶುಂಠಿ ರಸ ಮತ್ತು ಬೇಲದ ಹಣ್ಣು ಸೇರಿವೆ. ಈ ಎಲ್ಲಾ ಹಣ್ಣು ಮತ್ತು ತರಕಾರಿಗಳು ನೀರು ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಹಾಗಾಗಿ ದೇಹವನ್ನು ಹೈಡ್ರೇಟ್‌ ಆಗಿ ಇಡಬಹುದು. ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಸೂರ್ಯನ ಹಾನಿಯಿಂದ ಚರ್ಮವನ್ನು ರಕ್ಷಿಸಲು ಈ ಪದಾರ್ಥಗಳು ಸಹಾಯ ಮಾಡುತ್ತವೆ.

ಕಲ್ಲಂಗಡಿ ಸಲಾಡ್

ಕಲ್ಲಂಗಡಿ ಹಣ್ಣು ಹೆಚ್ಚಿನ ಪ್ರಮಾಣದ ನೀರನ್ನು ಹೊಂದಿರುತ್ತದೆ. ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಫೈಬರ್ ಕಾರಣ ಇದನ್ನು ತಿಂದ ನಂತರ ಹಸಿವಾಗುವುದಿಲ್ಲ. ಹಾಗಾಗಿ ಇದು ತೂಕ ನಿರ್ವಹಣೆಯಲ್ಲಿ ಸಹಾಯಕವಾಗಿದೆ. ಕಲ್ಲಂಗಡಿಯಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಇದು ಉತ್ಕರ್ಷಣ ನಿರೋಧಕವಾಗಿದೆ ಮತ್ತು ಸೂರ್ಯನ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಸೌತೆಕಾಯಿ ಶುಂಠಿ ಜ್ಯೂಸ್‌

ಸೌತೆಕಾಯಿಯಲ್ಲಿ ಕೂಡ ಹೆಚ್ಚಿನ ಪ್ರಮಾಣದ ನೀರು ಇರುತ್ತದೆ.  ಶುಂಠಿಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಅದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ರಕ್ತಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇವೆರಡನ್ನೂ ಬೆರೆಸಿ ಜ್ಯೂಸ್‌ ಮಾಡಿಕೊಂಡು ಕುಡಿದರೆ ತೂಕ ಇಳಿಸಬಹುದು. ಚರ್ಮವನ್ನು ಸಹ ಆರೋಗ್ಯಕರವಾಗಿಡಬಹುದು.

ಬೇಲದ ಹಣ್ಣಿನ ಜ್ಯೂಸ್‌

ಬೇಲದ ಹಣ್ಣು ನೈಸರ್ಗಿಕವಾಗಿ ದೇಹವನ್ನು ಹೈಡ್ರೀಕರಿಸುತ್ತದೆ. ದಿನವಿಡೀ ನಮ್ಮನ್ನು ಹೈಡ್ರೀಕರಿಸಲು ಅಗತ್ಯವಾದ ದ್ರವಗಳನ್ನು ಒದಗಿಸುತ್ತದೆ. ಇದನ್ನು ಸೇವಿಸುವುದರಿಂದ ಬೇಸಿಗೆ ಕಾಲದಲ್ಲಿ ಜೀರ್ಣಕ್ರಿಯೆ ಸುಲಭವಾಗುತ್ತದೆ. ಇದು ತೂಕ ಇಳಿಕೆ ಮತ್ತು ತ್ವಚೆಯ ಆರೋಗ್ಯಕ್ಕೆ ಮುಖ್ಯವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read