ಬಡತನದ ಮುನ್ಸೂಚನೆ ನೀಡುತ್ತವೆ ಮನೆಯಲ್ಲಿ ನಡೆಯುವ ಈ ಘಟನೆಗಳು….!

ನಮ್ಮ ಬದುಕಿನಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಸಂಕೇತಗಳ ಬಗ್ಗೆ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಭವಿಷ್ಯದಲ್ಲಿ ಸಂಭವಿಸುವ ಇಂತಹ ಘಟನೆಗಳ ಬಗ್ಗೆ ಮುನ್ಸೂಚನೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಸಂಕೇತಗಳನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಜೀವನದಲ್ಲಿ ಇಂತಹ ಅನೇಕ ಘಟನೆಗಳು ಒಳ್ಳೆಯ ಅಥವಾ ಕೆಟ್ಟ ಸಮಯಗಳು ಬರುವ ಮೊದಲು ನಮ್ಮನ್ನು ಎಚ್ಚರಿಸುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಗೆ ಹಣ ಬರುವ ಮುನ್ನ ಹಲವು ರೀತಿಯ ಸೂಚನೆಗಳು ಸಿಗುತ್ತವೆ. ಚಿಹ್ನೆಗಳು ಕಂಡುಬರುತ್ತವೆ. ತಾಯಿ ಲಕ್ಷ್ಮಿ ಮನೆ ಪ್ರವೇಶಿಸುವ ಮೊದಲು ಅನೇಕ ರೀತಿಯ ಮುನ್ಸೂಚನೆಗಳು ಕಂಡುಬರುತ್ತವೆ. ಅದೇ ರೀತಿ ಒಬ್ಬ ವ್ಯಕ್ತಿಯು ಆರ್ಥಿಕ ನಷ್ಟದ ಬಗ್ಗೆ ಅಥವಾ ಲಕ್ಷ್ಮಿ ದೇವಿ ಮನೆಯಿಂದ ಹೊರಡುವ ಮೊದಲು ಕೂಡ ಮುನ್ಸೂಚನೆಗಳಿರುತ್ತವೆ. ಇವು ವ್ಯಕ್ತಿಯ ಜೀವನದಲ್ಲಿ ಬರಬಹುದಾದ ಸಮಸ್ಯೆ, ಕಷ್ಟಗಳು, ಬಡತನ ಇತ್ಯಾದಿಗಳ ಬಗ್ಗೆ ಮುಂಚಿತವಾಗಿ ಹೇಳುತ್ತವೆ. ಇಂತಹ ಕೆಲವು ಸಂಕೇತಗಳ ಬಗ್ಗೆ ತಿಳಿಯೋಣ.

ಆಭರಣಗಳ ನಷ್ಟ ಅಥವಾ ಕಳ್ಳತನ

ಚಿನ್ನ ಮತ್ತು ಬೆಳ್ಳಿ ಬಹಳ ಮಂಗಳಕರ ವಸ್ತುಗಳು. ಇಂತಹ ಆಭರಣಗಳು ಕಳ್ಳತನವಾದರೆ ಅಥವಾ ಕಳೆದುಹೋದರೆ ಅದು ಲಕ್ಷ್ಮಿ ದೇವಿಯ ಕೋಪದ ಸಂಕೇತವಾಗಿದೆ. ಅಂತಹ ಸಮಯದಲ್ಲಿ ವಸ್ತುಗಳನ್ನು ಭದ್ರವಾಗಿಟ್ಟುಕೊಳ್ಳಬೇಕು. ಜೀವನದಲ್ಲಿ ಬರುವ ಅಪಾಯವನ್ನು ತಪ್ಪಿಸಲು ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಬೇಕು.

ಮನೆಯಲ್ಲಿ ತೊಟ್ಟಿಕ್ಕುವ ನಲ್ಲಿ

ವಾಸ್ತುವಿನ ಪ್ರಕಾರ ಸದಾ ನೀರು ತೊಟ್ಟಿಕ್ಕುತ್ತಲೇ ಇರುವ ನಲ್ಲಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗಾದರೆ ಆರ್ಥಿಕ ನಷ್ಟವಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಅಡುಗೆಮನೆ, ಸ್ನಾನಗೃಹ ಅಥವಾ ಟ್ಯಾಂಕ್‌ನಿಂದ ನೀರು ಜಿನುಗುತ್ತಿದ್ದರೆ ಅದನ್ನು ಸರಿಪಡಿಸಬೇಕು. ಅದನ್ನು ನಿರ್ಲಕ್ಷಿಸಿದರೆ ಆರ್ಥಿಕ ನಷ್ಟವಾಗಬಹುದು.

ಮನಿ ಪ್ಲಾಂಟ್ ಒಣಗುವುದು

ಮನೆಯಲ್ಲಿರುವ ಮನಿ ಪ್ಲಾಂಟ್ ಕಾರಣವಿಲ್ಲದೆ ಒಣಗಲಾರಂಭಿಸಿದರೆ ಅದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಕೂಡ ಲಕ್ಷ್ಮಿ ದೇವಿಯು ಕೋಪಗೊಂಡಿದ್ದಾಳೆಂಬ ಸೂಚನೆ. ಮನಿ ಪ್ಲಾಂಟ್ ಸಂಪತ್ತನ್ನು ಆಕರ್ಷಿಸುತ್ತದೆ. ಮನಿ ಪ್ಲಾಂಟ್ ಒಣಗುವಿಕೆ ಭವಿಷ್ಯದ  ಆರ್ಥಿಕ ನಷ್ಟವನ್ನು ಸೂಚಿಸುತ್ತದೆ.

ಹಾಲು ಉಕ್ಕುವುದು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಲು ತಾಯಿ ಲಕ್ಷ್ಮಿಗೆ ಸಂಬಂಧಿಸಿದೆ. ಲಕ್ಷ್ಮಿ ದೇವಿಗೆ ಹಾಲು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿದರೆ ಆಕೆ ಸಂತುಷ್ಟಳಾಗುತ್ತಾಳೆ. ಆದರೆ ಮನೆಯಲ್ಲಿ ಆಗಾಗ ಹಾಲು ಚೆಲ್ಲುವುದು ಅಥವಾ ಉಕ್ಕುವುದು ಮಂಗಳಕರವಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read