ಬೇಸಿಗೆಯಲ್ಲಿ ದೇಹಕ್ಕೆ ಹಿತ ನೀಡುತ್ತವೆ ಈ ಹಣ್ಣುಗಳು

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಂಡರೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಇದಕ್ಕಾಗಿ ನಾವು ಆಹಾರದ ಕಡೆಗೆ ವಿಶೇಷ ಗಮನ ಕೊಡಬೇಕು. ಡಿಹೈಡ್ರೇಶನ್‌ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಕೆಲವೊಂದು ಹಣ್ಣುಗಳು ಕೂಡ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತವೆ. ಬಿಸಿಲಿನಿಂದ ಉಪಶಮನ ನೀಡುವ ಹಣ್ಣುಗಳು ಯಾವುವು ಎಂದು ತಿಳಿಯೋಣ.

ಕಲ್ಲಂಗಡಿ: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಬೇಕು. ಇದು ಶೇ.92ರಷ್ಟು ನೀರಿನ ಅಂಶವನ್ನು ಹೊಂದಿರುವುದರಿಂದ ನಿಮ್ಮ ದೇಹದಲ್ಲಿ ನೀರಿನ ಮಟ್ಟ ಕಾಪಾಡುತ್ತದೆ. ಅಜೀರ್ಣ ಸಮಸ್ಯೆ ಇರುವವರಿಗೆ ಈ ಹಣ್ಣು ತುಂಬಾ ಉಪಯುಕ್ತವಾಗಿದೆ.

ಬೇಲದ ಹಣ್ಣು : ಬೇಸಿಗೆ ಬಂತೆಂದರೆ ಬೇಲದ ಹಣ್ಣಿನ ಜ್ಯೂಸ್‌ ಗೆ ಎಲ್ಲಿಲ್ಲದ ಬೇಡಿಕೆ. ಈ ಜ್ಯೂಸ್ ಕುಡಿದರೆ ಹೀಟ್ ಆಗುವುದಿಲ್ಲ ಮತ್ತು ನಿಮ್ಮ ಹೊಟ್ಟೆ ತಂಪಾಗಿರುತ್ತದೆ.

ಹಿಪ್ಪುನೇರಳೆ : ಬೇಸಿಗೆಯಲ್ಲಿ ಹಿಪ್ಪುನೇರಳೆ ಏಕೆ ತಿನ್ನಬೇಕು ಗೊತ್ತಾ? ಇದನ್ನು ತಿನ್ನುವುದರಿಂದ ಹಲವಾರು ರೀತಿಯ ಕಾಯಿಲೆಗಳು ಸಹ ನಿಮ್ಮಿಂದ ದೂರ ಉಳಿಯುತ್ತವೆ. ಇದನ್ನು ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವೂ ನಿಯಂತ್ರಣದಲ್ಲಿರುತ್ತದೆ. ಮಧುಮೇಹ ರೋಗಿಗಳಿಗೆ ಸಹ ಇದು ಪ್ರಯೋಜನಕಾರಿಯಾಗಿದೆ.

ನೇರಳೆ ಹಣ್ಣು : ನೇರಳೆ ಹಣ್ಣಿನಲ್ಲಿ ವಿಟಮಿನ್‌ ಸಿ ಇದೆ. ಉತ್ಕರ್ಷಣ ನಿರೋಧಕಗಳನ್ನು ಇದು ಹೊಂದಿರುತ್ತದೆ. ಇದು ಬೇಸಿಗೆಯಲ್ಲಿ ನಿಮ್ಮನ್ನು ತಾಜಾ ಆಗಿರಿಸಬಲ್ಲದು. ಬೇಸಿಗೆಯಲ್ಲಿ ನೇರಳೆ ಹಣ್ಣು ತಿನ್ನುವುದರಿಂದ ದೇಹಕ್ಕೆ ಹೀಟ್‌ ಆಗುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read