ಕ್ಯಾನ್ಸರ್ ನಿಂದ ದೂರ ಇರಬೇಕೆಂದ್ರೆ ಈ ಆಹಾರದ ಹತ್ತಿರವೂ ಹೋಗ್ಬೇಡಿ

ಮಾರಕ ರೋಗಗಳಲ್ಲಿ ಕ್ಯಾನ್ಸರ್‌ ಒಂದು. ಪ್ರತಿ ವರ್ಷ ಸಾವಿರಾರು ಮಂದಿ ಈ ಕ್ಯಾನ್ಸರ್‌ ಗೆ ಬಲಿ ಆಗ್ತಿದ್ದಾರೆ. ಮುಂದಿನ ದಶಕದಲ್ಲಿ ಭಾರತದಲ್ಲಿ ಸುಮಾರು 10 ಮಿಲಿಯನ್ ಜನರು ಕ್ಯಾನ್ಸರ್‌ ಗೆ ಒಳಗಾಗಲಿದ್ದಾರೆ ಎಂದು ತಜ್ಞರು ಅಂದಾಜಿಸಿದ್ದಾರೆ. ಕ್ಯಾನ್ಸರ್‌ ನಮ್ಮ ಬಳಿ ಸುಳಿಯಬಾರದು ಅಂದ್ರೆ ನಾವು ಎಚ್ಚರಿಕೆ ಹೆಜ್ಜೆ ಇಡಬೇಕು. ನಮ್ಮ ಜೀವನಶೈಲಿ ಹಾಗೂ ನಾವು ಸೇವನೆ ಮಾಡುವ ಆಹಾರ ನಮ್ಮ ಆರೋಗ್ಯದ ಮೇಲೆ ದೊಡ್ಡ ಹೊಡೆತ ನೀಡ್ತಿದೆ. ಕೆಲ ಆಹಾರ ಸೇವನೆ ಕ್ಯಾನ್ಸರ್‌ ಗೆ ದಾರಿಮಾಡಿ ಕೊಡ್ತಿದೆ. ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ, ಸ್ಥೂಲಕಾಯತೆ, ಆಲ್ಕೋಹಾಲ್ ಮತ್ತು ಯುವಿ ಕಿರಣಗಳಿಗೆ ಒಡ್ಡಿಕೊಳ್ಳುವುದು ಕ್ಯಾನ್ಸರ್‌ ಗೆ ಕಾರಣವಾಗ್ತಿದೆ.

ಕರಿದ ಆಹಾರ : ಕರಿದ ಆಹಾರ ತಿನ್ನುತ್ತಿದ್ರೆ ಬಾಯಿ ನಿಲ್ಲೋದಿಲ್ಲ. ಅದ್ರ ರುಚಿ ಹೆಚ್ಚು. ಆದ್ರೆ ಆಲೂಗಡ್ಡೆ ಅಥವಾ ಮಾಂಸದಂತಹ ಆಹಾರಗಳನ್ನು ಹೆಚ್ಚಿನ ತಾಪಮಾನದಲ್ಲಿ ಹುರಿಯುವಾಗ ಅಕ್ರಿಲಾಮೈಡ್ ಎಂಬ ಸಂಯುಕ್ತವು ರೂಪುಗೊಳ್ಳುತ್ತದೆ. ಡಿಎನ್ಎಗೆ ಹಾನಿ ಮಾಡುವ ಈ ಸಂಯುಕ್ತದಲ್ಲಿ ಕಾರ್ಸಿನೋಜೆನಿಕ್ ಗುಣಲಕ್ಷಣಗಳು ಕಂಡುಬರುತ್ತವೆ. ಇದಲ್ಲದೆ  ಕರಿದ ಆಹಾರವನ್ನು ಸೇವಿಸುವುದರಿಂದ ಆಕ್ಸಿಡೇಟಿವ್ ಒತ್ತಡ ಮತ್ತು ದೇಹದಲ್ಲಿ ಉರಿಯೂತ ಹೆಚ್ಚಾಗುತ್ತದೆ. ಇದು ಕ್ಯಾನ್ಸರ್‌ ಗೆ ಕಾರಣವಾಗುತ್ತದೆ.

ಸಂಸ್ಕರಿಸಿದ ಮಾಂಸ : ಸಂಸ್ಕರಿಸಿದ ಮಾಂಸ ಸೇವನೆ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಹಾಗಾಗಿ ಸಂಸ್ಕರಿಸಿದ ಮಾಂಸದಿಂದ ದೂರವಿರುವುದು ಒಳ್ಳೆಯದು.

ಉಪ್ಪಿರುವ ಮೀನು : ಕೆಲ ಮೀನುಗಳು ಉಪ್ಪಿನಿಂದ ಕೂಡಿರುತ್ತವೆ. ಆ ಮೀನುಗಳ ಸೇವನೆ ಮಾಡಿದ್ರೆ ನಿಮ್ಮ ಆರೋಗ್ಯ ಹದಗೆಡುತ್ತದೆ. ಅಲ್ಲದೆ ಸಕ್ಕರೆ ತಯಾರಿಸಲು ಬಳಸುವ ವಸ್ತು ಕೂಡ ಕ್ಯಾನ್ಸರ್‌ ಗೆ ಕಾರಣವಾಗುತ್ತದೆ.

ಮೈದಾ – ಸಕ್ಕರೆ – ಎಣ್ಣೆ : ಈ ಮೂರೂ ನಿಮ್ಮ ಆರೋಗ್ಯಕ್ಕೆ ಶತ್ರು. ಇವುಗಳ ಸೇವನೆಯನ್ನು ನಿಧಾನವಾಗಿ ಕಡಿಮೆ ಮಾಡ್ತಾ ಬರೋದು ಒಳ್ಳೆಯದು. ಇದು ಕ್ಯಾನ್ಸರ್‌ ಕೋಶ ಬೆಳವಣಿಗೆಗೆ ದಾರಿಮಾಡಿಕೊಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read