ಪುರುಷರ ಲೈಂಗಿಕ ಆರೋಗ್ಯ ಹೆಚ್ಚಿಸುತ್ತವೆ ಈ ʼಆಹಾರʼಗಳು

ಬಿಡುವಿಲ್ಲದೆ ಕೆಲಸ ಮಾಡುವ ಜನರು ತಮ್ಮ ಆರೋಗ್ಯವನ್ನು ಮರೆಯುತ್ತಿದ್ದಾರೆ. ಇದ್ರಿಂದಾಗಿ ಜನರಿಗೆ ಪೋಷಕಾಂಶದ ಕೊರತೆ ಎದುರಾಗ್ತಿದೆ. ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚಿನ ಶಕ್ತಿ ಅವಶ್ಯಕತೆಯಿದೆ. ಆರೋಗ್ಯಕರ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ದೇಹಕ್ಕೆ ಶಕ್ತಿ ನೀಡುವ ಜೊತೆಗೆ ಪುರುಷರ ದೈಹಿಕ ದೌರ್ಬಲ್ಯವನ್ನು ತೊಡೆದು ಹಾಕುವ ಶಕ್ತಿ ಕೆಲ ಆಹಾರಕ್ಕಿದೆ.

ಪುರುಷರು ಹಸಿರು ಸೊಪ್ಪನ್ನು ಅವಶ್ಯಕವಾಗಿ ತಿನ್ನಬೇಕು. ಪಾಲಕ್ ಸೇವನೆ ತುಂಬಾ ಒಳ್ಳೆಯದು. ಪಾಲಕ ದೇಹದಲ್ಲಿನ ರಕ್ತದ ಹರಿವನ್ನು ಸರಿಪಡಿಸಿ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಪಾಲಾಕನ್ನು ನೀವು ಹಸಿಯಾಗಿ ಸೇವನೆ ಮಾಡಬೇಕಾಗಿಲ್ಲ. ಸಲಾಡ್ ರೀತಿಯಲ್ಲಿ ಇಲ್ಲವೆ ಪ್ರೋಟೀನ್ ಶೇಕ್ ಜೊತೆ ಸೇವನೆ ಮಾಡಬಹುದು.

ಪ್ರತಿದಿನ ಪುರುಷರು ಬಾದಾಮಿ ತಿನ್ನಬೇಕು. ಮೆಗ್ನೀಸಿಯಮ್ ಬಾದಾಮಿಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಪುರುಷರು ಮೆಗ್ನೀಸಿಯಮ್ ಕೊರತೆಯನ್ನು ಹೊಂದಿರುತ್ತಾರೆ. ಮೆಗ್ನೀಸಿಯಮ್ ಸ್ನಾಯು ಮತ್ತು ನರಗಳನ್ನು ಬಲಗೊಳಿಸುತ್ತದೆ. ಬಾದಾಮಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೆ ಬಾದಾಮಿ ಅವಶ್ಯಕ.

ಮೊಸರಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಕ್ಯಾಲ್ಸಿಯಂ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಅವಶ್ಯಕ. ಪುರುಷರಿಗೆ ಮಹಿಳೆಯರಂತೆಯೇ ಆಸ್ಟಿಯೊಪೊರೋಸಿಸ್ ಅಪಾಯವಿದೆ. ಹಾಗಾಗಿ ಪುರುಷರು ಪ್ರತಿದಿನ ಮೊಸರು ತಿನ್ನಬೇಕು. ಮೊಸರಿಗೆ ಸಕ್ಕರೆ ಬದಲು ಹಣ್ಣುಗಳನ್ನು ಬೆರೆಸಿ ತಿನ್ನುವುದು ಉಪಯುಕ್ತ.

ಲೈಕೋಪೀನ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವಂತಹ ಆಹಾರವನ್ನು ಪುರುಷರು ಸೇವನೆ ಮಾಡಬೇಕು. ಟೊಮೆಟೊ ಲೈಕೋಪೀನ್‌ನ ಪ್ರಮುಖ ಮೂಲವಾಗಿದೆ. ಲೈಕೋಪೀನ್ ಒಂದು ಉತ್ಕರ್ಷಣ ನಿರೋಧಕವಾಗಿದ್ದು, ಪುರುಷರನ್ನು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪುರುಷರು ಆಲೂಗಡ್ಡೆ ತಿನ್ನಲು ಇಷ್ಟಪಡುವುದಿಲ್ಲ. ಇದರಿಂದಾಗಿ ಬೇಗ ಶಕ್ತಿ ಕಳೆದುಕೊಳ್ಳುತ್ತಾರೆ. ಆಲೂಗಡ್ಡೆ ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಸಿಯಮ್ ಹೊಂದಿದೆ. ಇದರಲ್ಲಿ ಸ್ವಲ್ಪ ಪ್ರಮಾಣದ ವಿಟಮಿನ್ ಸಿ ಮತ್ತು ಫೈಬರ್ ಇದ್ದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆಲೂಗಡ್ಡೆಯಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಪುರುಷರು ಪ್ರತಿದಿನ ಧಾನ್ಯಗಳನ್ನು ಸೇವಿಸಬೇಕು. ಧಾನ್ಯಗಳು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಧಾನ್ಯಗಳನ್ನು ತಿನ್ನುವುದ್ರಿಂದ ದೇಹ ಶಕ್ತಿ ಪಡೆಯುತ್ತದೆ.

ಕಲ್ಲಂಗಡಿಯಲ್ಲಿ ಉತ್ತಮ ಪ್ರಮಾಣದ ಲೈಕೋಪೀನ್ ಇದ್ದು, ಇದು ಪುರುಷರನ್ನು ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಬೇಸಿಗೆಯಲ್ಲಿ ಇದನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ರೋಗವನ್ನು ತಡೆಗಟ್ಟುವುದರ ಜೊತೆಗೆ ದೇಹದಲ್ಲಿನ ನೀರಿನ ಕೊರತೆಯನ್ನೂ ಇದು ಕಡಿಮೆ ಮಾಡುತ್ತದೆ. ಕಲ್ಲಂಗಡಿ ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಕಂಡುಬರುವ ಸಿಟ್ರುಲೈನ್ ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತದೆ. ಇದು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಸೆಕ್ಸ್ ಡ್ರೈವ್ ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read