ಚರ್ಮದ ಸಮಸ್ಯೆ ಅಥವಾ ಮೊಡವೆ ಸಮಸ್ಯೆ ವಯಸ್ಸು ನೋಡಿ ಬರುವುದಿಲ್ಲ. ವಿವಿಧ ವಯೋಮಾನದವರು ಈ ಸಮಸ್ಯೆಗೆ ಗುರಿಯಾಗುತ್ತಾರೆ. ಹಾರ್ಮೋನುಗಳ ಸಮಸ್ಯೆಗಳು ಮತ್ತು ಪಪೌಷ್ಟಿಕಾಂಶದ ಕಾರಣದಿಂದಾಗಿ ಬಹಳಷ್ಟು ಚರ್ಮದ ಸಮಸ್ಯೆಗಳು ಸಂಭವಿಸುತ್ತವೆ. ಹದಿಹರೆಯದವರು ಮಾತ್ರವಲ್ಲ, 30 ಮತ್ತು 40 ರ ವಯಸ್ಸಿನ ಜನರು ಕೂಡ ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಹಿಳೆಯರು, ವಿಶೇಷವಾಗಿ, ತಮ್ಮ 30 ಮತ್ತು 40 ವಯಸ್ಸಿನಲ್ಲು ಬಹಳಷ್ಟು ಮೊಡವೆ ಸಮಸ್ಯೆಗಳನ್ನು ಎದುರಿಸುತ್ತಾರೆ. ವಿವಿಧ ಕಾರಣಗಳಿಂದ ಇದು ಸಂಭವಿಸಬಹುದು.
ಮೊಡವೆ ಹೊರಹೊಮ್ಮುವಿಕೆಗೆ ಕಾರಣವಾಗುವ ಅಂಶಗಳು
1. ಹಾರ್ಮೋನ್ ಅಸಮತೋಲನ: ಚರ್ಮಶಾಸ್ತ್ರಜ್ಞರ ಪ್ರಕಾರ ಮಹಿಳೆಯ ಮುಟ್ಟಿನ ಸಂಪೂರ್ಣ ವಿವರ ಇಟ್ಟುಕೊಂಡು, ಮುಟ್ಟಿನ ಅವಧಿ ಸಾಮಾನ್ಯವಾಗಿದೆ ಎಂದು ಪರೀಕ್ಷಿಸಿ. ಇಲ್ಲವಾದರೆ ಇದು ಚರ್ಮದ ಸ್ಥಿತಿಯನ್ನ ಮತ್ತಷ್ಟು ಹದಗೆಡಿಸುತ್ತದೆ.
2. ಒತ್ತಡ: ಯಾವುದೇ ರೀತಿಯ ಒತ್ತಡವು ಮೊಡವೆ ಸೇರಿದಂತೆ ಚರ್ಮದ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ” ಎಂದು ಡಾ. ಆಂಚಲ್ ಹೇಳುತ್ತಾರೆ
3. ಬಿಸಿಲು: ಹೆಚ್ಚಾಗಿ ಬಿಸಿಲಲ್ಲಿ ಒಡಾಡುವಾಗ ಸ್ಕಿನ್ ಡ್ಯಾಮೇಜ್ ನಿಂದ ಮೊಡವೆಗಳು ಹೆಚ್ಚಾಗುತ್ತವೆ
4. ಸಕ್ಕರೆ ಮತ್ತು ಹಾಲಿನ ಸೇವನೆ: ಸಕ್ಕರೆ ಮತ್ತು ಹಾಲು ಸೇವನೆಯಿಂದ ಮೊಡವೆ ಉಂಟಾಗುತ್ತದೆ. “ಮೊಡವೆ ಇರುವಾಗ ಸಕ್ಕರೆ ಮತ್ತು ಹಾಲನ್ನು ತ್ಯಜಿಸಬೇಕು. ಅವು ದೇಹದಲ್ಲಿ ಇನ್ಸುಲಿನ್ ಅನ್ನು ಹೆಚ್ಚಿಸುತ್ತವೆ. IGF ಹೆಚ್ಚು ತೈಲವನ್ನು ತಯಾರಿಸಲು ತೈಲ ರಚನೆಯ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಆದ್ದರಿಂದ ಮೊಡವೆಗಳು ಮತ್ತಷ್ಟು ಹದಗೆಡುತ್ತವೆ.
5. ಒಬೆಸಿಟಿ ಹಾಗೂ ಕೊಲೆಸ್ಟರಾಲ್: ತೂಕ ಹೆಚ್ಚಾದಾಗ ಮತ್ತು ದೇಹದಲ್ಲಿ ಫ್ಯಾಟ್ ಜಾಸ್ತಿಯಾದಾಗ ಆಗುವ ಬದಲಾವಣೆಗಳು ಮೊದಲು ಚರ್ಮದ ಮೇಲೆ ಮೊಡವೆ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಉತ್ತಮ ಡಯಟ್ ಹಾಗೂ ಲಘು ವ್ಯಾಯಾಮದಿಂದ ದೇಹದ ತೂಕ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ ಎಂದು ಡಾ ಅಂಚಲ್ ತಿಳಿಸಿದ್ದಾರೆ.