Viral Video | ಲಂಟಾನಾದಿಂದ ಆನೆಗಳ ಜೀವಗಾತ್ರದ ಕಲಾಕೃತಿ; ಬುಡಕಟ್ಟು ಜನಾಂಗದ ಅದ್ಭುತ ಕೌಶಲ್ಯ

ತಮಿಳುನಾಡಿನ ಕಡಲೂರಿನ ಬುಡಕಟ್ಟು ಜನಾಂಗವೊಂದು ತನ್ನ ಕಲಾಕೃತಿಗಳ ಮೂಲಕ ಸುದ್ದಿಯಲ್ಲಿದೆ. ಲಂಟಾನಾದಿಂದ ಮಾಡಲ್ಪಟ್ಟ ಆನೆಗಳ ಜೀವಗಾತ್ರದ ಕಲಾಕೃತಿಗಳ ಮೂಲಕ ನೀಲಗಿರಿಯ ಈ ಬುಡಕಟ್ಟು ಜನಾಂಗ ಸುದ್ದಿಯಲ್ಲಿದೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಈ ವಿಡಿಯೋ ಶೇರ್‌ ಮಾಡಿದ್ದಾರೆ. ಬುಡಕಟ್ಟು ಜನಾಂಗದ ಮಂದಿ ಲಂಟಾನಾ ಬಳಸಿಕೊಂಡು ಈ ಕಲಾಕೃತಿಗಳನ್ನು ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ ಸುಪ್ರಿಯಾ. ಶೆಡ್‌ ಒಂದರ ಒಳಗೆ ಕುಳಿತ ಈ ಜನರು ತಮ್ಮ ಕೆಲಸದಲ್ಲಿ ಮಗ್ನರಾಗಿರುವುದನ್ನು ನೋಡಬಹುದಾಗಿದೆ.

“ಗುಡಲೂರು ಭೇಟಿ ಸಂದರ್ಭದಲ್ಲಿ, ಈ ಘಟಕದಲ್ಲಿ ಬುಡಕಟ್ಟಿನ ಯುವಕರು ಲಂಟಾನಾದಲ್ಲಿ ಆನೆಗಳ ಜೀವಗಾತ್ರದ ಕಲಾಕೃತಿಗಳನ್ನು ರಚಿಸುತ್ತಿರುವುದನ್ನು ನೋಡಲು ಸಂತಸವಾಗುತ್ತದೆ. 100ರಷ್ಟು ಜನ ತಮ್ಮ ಕೈಗಳಿಂದ ಜಾದೂ ಮಾಡುತ್ತಿದ್ದಾರೆ. ಲಂಟಾನಾ ನಿರ್ಮೂಲನೆಯೊಂದಿಗೆ ಸ್ಥಳೀಯರಿಗೆ ಜೀವನೋಪಾಯ ಸೃಷ್ಟಿಸುವ ಇದೊಂದು ಅದ್ಭುತ ಉಪಾಯ,” ಎಂದು ಅಧಿಕಾರಿ ಬರೆದಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read