ಪೆಟ್ರೋಲ್‌ – ಡೀಸೆಲ್‌ ಗೊಡವೆಯೇ ಬೇಡ; ಭಾರತದಲ್ಲಿ ಲಭ್ಯವಿವೆ ಅಗ್ಗದ ಈ ಎಲೆಕ್ಟ್ರಿಕ್‌ ಕಾರುಗಳು !

ಪೆಟ್ರೋಲ್-ಡೀಸೆಲ್ ದರ ಗಗನಕ್ಕೇರಿರುವುದರಿಂದ ಸ್ವಂತ ವಾಹನದಲ್ಲಿ ಓಡಾಡುವವರ ಜೇಬಿಗೆ ಕತ್ತರಿ ಬೀಳ್ತಿದೆ. ಹಾಗಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವುದು ಉತ್ತಮ. ಮಧ್ಯಮವರ್ಗದವರೂ ಕೊಂಡುಕೊಳ್ಳುವಂತಹ ಬಜೆಟ್‌ ಫ್ರೆಂಡ್ಲಿ ಎಲೆಕ್ಟ್ರಿಕ್‌ ಕಾರುಗಳು ಭಾರತದಲ್ಲಿವೆ. ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಗ್ಗದ ಎಲೆಕ್ಟ್ರಿಕ್ ಕಾರುಗಳು ಯಾವುವು ಅನ್ನೋದನ್ನು ನೋಡೋಣ.

ಎಂಜಿ ಕಾಮೆಟ್‌ – ಈ ಎಲೆಕ್ಟ್ರಿಕ್‌ ಕಾರಿನ ಆರಂಭಿಕ ಬೆಲೆ 7.98 ಲಕ್ಷ ರೂಪಾಯಿ. ಇದು ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

ಟಾಟಾ ಟಿಯಾಗೊ – ಎರಡನೇ ಸ್ಥಾನದಲ್ಲಿದೆ ಟಾಟಾ ಟಿಯಾಗೊ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್. ಇದರ ಆರಂಭಿಕ ಬೆಲೆ 8.69 ಲಕ್ಷ ರೂಪಾಯಿ. ಇದು 24 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, 315 ಕಿಮೀ ವರೆಗೆ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯ ಈ ಕಾರಿಗಿದೆ.

tata tigor ev – ಟಾಟಾ ಕಂಪನಿಯ ಎಲೆಕ್ಟ್ರಿಕ್‌ ಸೆಡಾನ್‌ ಕಾರು ಇದು. ಈ ಕಾರಿನ ಆರಂಭಿಕ ಬೆಲೆ 12.49 ಲಕ್ಷ ರೂಪಾಯಿ. ಇದು 26 ಕಿಲೋವ್ಯಾಟ್‌ ಬ್ಯಾಟರಿ ಪ್ಯಾಕ್‌ ಹೊಂದಿದ್ದು, 315 ಕಿಮೀ ಓಡಬಲ್ಲದು.

ಮಹಿಂದ್ರಾ ಎಕ್ಸ್‌ಯುವಿ 400 – ಮಹಿಂದ್ರಾ ಎಕ್ಸ್‌ಯುವಿ 400 ಕೂಡ ಬಜೆಟ್‌ ಫ್ರೆಂಡ್ಲಿಯಾಗಿದೆ. ಇದರಲ್ಲಿ 39.4 ಕಿಲೋವ್ಯಾಟ್‌ ಬ್ಯಾಟರಿ ಅಳವಡಿಸಿದ್ದು, ಒಮ್ಮೆ ಚಾರ್ಜ್‌ ಮಾಡಿದ್ರೆ 456 ಕಿಮೀ ಚಲಿಸಬಲ್ಲದು. ಈ ಕಾರಿನ ಆರಂಭಿಕ ಬೆಲೆ 15.98 ಲಕ್ಷ ರೂಪಾಯಿ.

Citroën EC3 – ಐದನೇ ಸ್ಥಾನದಲ್ಲಿ Citroën EC3 ಎಲೆಕ್ಟ್ರಿಕ್ ಕಾರಿದೆ. ಇದರ ಆರಂಭಿಕ ಬೆಲೆ 11.50 ಲಕ್ಷ ರೂಪಾಯಿ ಇದೆ. ಈ ಕಾರು 29.2kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಇದರ ವ್ಯಾಪ್ತಿ 320 ಕಿ .ಮೀ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read