ನಮ್ಮ ಮೆದುಳಿಗೆ ಹಾನಿ ಮಾಡುತ್ತವೆ ದೈನಂದಿನ ಈ ಅಭ್ಯಾಸಗಳು….!

ಎಲ್ಲಾ ಕಡೆ ದೇಹದ ಆರೋಗ್ಯದ ಬಗ್ಗೆ ಮಾತ್ರ ಕೇಳಿರ್ತೀವಿ. ಪುಸ್ತಕ, ಬ್ಲಾಗ್, ಟಿವಿ ಎಲ್ಲಿ ನೋಡಿದ್ರೂ ದೈಹಿಕ ಫಿಟ್ನೆಸ್‌ ಬಗ್ಗೆ ಮಾತ್ರ ಮಾಹಿತಿಗಳಿರುತ್ತವೆ. ಮೆದುಳಿನ ಆರೋಗ್ಯದ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ. ಈ ಸೂಪರ್‌ ಫಾಸ್ಟ್‌ ಬದುಕಿನಲ್ಲಿ ನಿಮ್ಮ ಮನಸ್ಸು ಸಾಕಷ್ಟು ಒತ್ತಡದಿಂದ ಕೂಡಿರುತ್ತದೆ. ಹಾಗಾಗಿ ನಿಮ್ಮ ದಿನನಿತ್ಯದ ಅಭ್ಯಾಸಗಳಿಂದ ಮೆದುಳಿಗೆ ಹಾನಿಯಾಗುವ ಅಪಾಯವಿರುತ್ತದೆ.

ನಿದ್ದೆಯ ಕೊರತೆ : ಚೆನ್ನಾಗಿ ನಿದ್ದೆ ಮಾಡದೇ ಇದ್ದರೆ ನಿಮ್ಮ ದೇಹವು ಆಯಾಸವನ್ನು ಅನುಭವಿಸುತ್ತದೆ. ನಿಮ್ಮ ಮನಸ್ಸಿನ ಕಾರ್ಯವಿಧಾನದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಪುನರಾವರ್ತಿತ ನಿದ್ರೆಯ ಅಭಾವದಿಂದ ನಿಮ್ಮ ಮೆದುಳು ಮತ್ತು ಸ್ಮರಣೆಯ ಮೇಲೆ ಆಳವಾದ ಪರಿಣಾಮ ಉಂಟಾಗುತ್ತದೆ.

ಅತಿಯಾದ ಉಪ್ಪು ಸೇವನೆ: ಜಾಸ್ತಿ ಉಪ್ಪು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇದರಿಂದ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವಿರುತ್ತದೆ. ಇದರಿಂದ ಮೆದುಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಶಬ್ಧ ಮಾಲಿನ್ಯ: ನೀವು ಶಬ್ದ ಮಾಲಿನ್ಯದಿಂದಲೂ ದೂರವಿರಲು ಪ್ರಯತ್ನಿಸಬೇಕು. ನಿಮ್ಮ ಕಿವಿಗಳಿಗೆ ಅಪ್ಪಳಿಸುವ ಅತಿಯಾದ ಶಬ್ದ ನಿಮ್ಮ ಮೆದುಳಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ.

ಏಕಾಂಗಿತನ: ನಿಮ್ಮ  ಮನಸ್ಸಿನ ಭಾವನೆ, ತುಮುಲಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಎಲ್ಲವನ್ನೂ ನಿಮ್ಮೊಳಗೇ ಇಟ್ಟುಕೊಂಡರೆ ಒತ್ತಡ ಹೆಚ್ಚಾಗುತ್ತದೆ. ನೋವು, ಟೆನ್ಷನ್‌ ಏನೇ ಇದ್ದರೂ ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸು ಶಾಂತವಾಗುತ್ತದೆ. ಮೆದುಳಿನ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read