ವಯಸ್ಸು 45 ದಾಟಿದ್ದರೂ ಸಖತ್‌ ಫಿಟ್‌ ಆಗಿದ್ದಾರೆ ಈ ಬಾಲಿವುಡ್‌ ಸ್ಟಾರ್ಸ್‌; ಇಲ್ಲಿದೆ ಅವರ ಫಿಟ್ನೆಸ್‌ ಸೀಕ್ರೆಟ್‌ !

ಫಿಟ್ನೆಸ್ ವಿಷಯದಲ್ಲಿ ಬಾಲಿವುಡ್ ನಟ – ನಟಿಯರು ಯಾರಿಗೂ ಕಮ್ಮಿಯಿಲ್ಲ. ಆರೋಗ್ಯದ ಜೊತೆಗೆ ದೇಹದ ಸೌಂದರ್ಯವನ್ನೂ ಕಾಪಾಡಿಕೊಳ್ಳಲು ಕಸರತ್ತು ಮಾಡ್ತಾರೆ. ವಯಸ್ಸು 45 ದಾಟಿದ್ರೂ ಸಿಕ್ಕಾಪಟ್ಟೆ ಫಿಟ್‌ ಆಗಿರೋ ಸ್ಟಾರ್‌ಗಳು ಅಭಿಮಾನಿಗಳಿಗೆ ಮಾದರಿ ಅಂದರೂ ತಪ್ಪಾಗಲಾರದು.

ಬಿಡುವಿಲ್ಲದ ಕೆಲಸದ ನಡುವೆಯೂ ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ, ಡಯಟ್‌ ಹೀಗೆ ಎಲ್ಲವನ್ನೂ ಅನುಸರಿಸುವ ಮೂಲಕ ಫಿಟ್ನೆಸ್‌ ಕಾಪಾಡಿಕೊಳ್ತಾರೆ. ಬಾಲಿವುಡ್‌ನ ಕೆಲವು ಕೆಲವು ಸೆಲೆಬ್ರಿಟಿಗಳ ಫಿಟ್ನೆಸ್ ನೋಡಿದ್ರೆ, ಅವರ ವಯಸ್ಸನ್ನು ಊಹಿಸುವುದು ಅಸಾಧ್ಯ.

ಮಲೈಕಾ ಅರೋರಾ ಫಿಟ್ನೆಸ್‌ನಲ್ಲಿ ನಟಿ ಮಲೈಕಾ ಅರೋರಾ ಅಗ್ರಸ್ಥಾನದಲ್ಲಿದ್ದಾರೆ. ಮಲೈಕಾಗೆ ಈಗ 49ರ ಹರೆಯ. ಬಳುಕುವ ಬಳ್ಳಿಯಂತಹ ದೇಹವನ್ನು ಕಾಪಾಡಿಕೊಂಡಿರೋ ಮಲೈಕಾ ಸಿಕ್ಕಾಪಟ್ಟೆ ಯಂಗ್‌ ಆಗಿ ಕಾಣ್ತಾರೆ. ಫಿಟ್ ಆಗಿರಲು ಮಲೈಕಾ ನಿಯಮಿತವಾಗಿ ಯೋಗ ಮತ್ತು ಇತರ ವ್ಯಾಯಾಮವನ್ನು ಮಾಡ್ತಾರೆ. ಆಹಾರದ ಬಗ್ಗೆಯೂ ಕಾಳಜಿ ವಹಿಸ್ತಾರೆ.

ನಿಂಬೆ ರಸ ಮತ್ತು ಜೇನುತುಪ್ಪ ಬೆರೆಸಿದ ಒಂದು ಲೋಟ ಬಿಸಿನೀರಿನೊಂದಿಗೆ ಮಲೈಕಾ ದಿನವನ್ನು ಪ್ರಾರಂಭಿಸುತ್ತಾರೆ. ಇದು ದೇಹದಲ್ಲಿರುವ ಕೊಳೆಯನ್ನು ಹೊರಹಾಕುವ ಮೂಲಕ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಸಮತೋಲಿತ ಜೀವನಶೈಲಿ ಕೂಡ ನಮಗೆ ಫಿಟ್ ಆಗಿರಲು ಸಹಾಯ ಮಾಡುತ್ತದೆ.

ಅಕ್ಷಯ್ ಕುಮಾರ್ಅಕ್ಷಯ್ ಕುಮಾರ್ ಬಾಲಿವುಡ್‌ನ ಫಿಟ್ಟೆಸ್ಟ್‌ ನಟರಲ್ಲಿ ಒಬ್ಬರು. ನೈಸರ್ಗಿಕ ರೀತಿಯಲ್ಲಿ ಅಕ್ಷಯ್‌ ಆರೋಗ್ಯವನ್ನು ಕಾಪಾಡಿಕೊಳ್ತಾರೆ. ನಿಯಮಿತವಾಗಿ ರನ್ನಿಂಗ್‌, ಕ್ರಿಯಾತ್ಮಕ ತರಬೇತಿ ಮತ್ತು ಸಮರ ಕಲೆಗಳಂತಹ ಹೊರಾಂಗಣ ಚಟುವಟಿಕೆಗಳನ್ನು ಮಾಡುತ್ತಾರೆ. ಬೆಳಗ್ಗೆ ನಾಲ್ಕು ಗಂಟೆಗೆಲ್ಲಾ ಏಳುವ ಅಕ್ಷಯ್‌ ಕುಮಾರ್‌, ಸಂಜೆ 6:30ರ ನಂತರ ಏನನ್ನೂ ತಿನ್ನುವುದಿಲ್ಲ.

ಹೃತಿಕ್ ರೋಷನ್ಹೃತಿಕ್ ರೋಷನ್ ಕೂಡ ಗ್ರೀಕ್‌ ಗಾಡ್‌ ಎಂದೇ ಫೇಮಸ್‌. ಹೃತಿಕ್‌ ಸಿಕ್ಕಾಪಟ್ಟೆ ಫಿಟ್‌ ಆಗಿದ್ದಾರೆ. ಇದರಿಂದ ಅಭಿಮಾನಿಗಳು ಪ್ರಭಾವಿತರಾಗಿದ್ದಾರೆ. ಹೃತಿಕ್ ರೋಷನ್ ಅವರ ಫಿಟ್ನೆಸ್ ರಹಸ್ಯವೆಂದರೆ ಕಠಿಣ ಪರಿಶ್ರಮ ಮತ್ತು ಶಿಸ್ತು. ಅವರು ನಿಯಮಿತವಾಗಿ ಜಿಮ್‌ಗೆ ಹೋಗುತ್ತಾರೆ. ಕ್ರಾಸ್‌ಫಿಟ್ ಮತ್ತು ವೇಟ್‌ಲಿಫ್ಟಿಂಗ್‌ನಂತಹ ವ್ಯಾಯಾಮಗಳನ್ನು ಮಾಡುತ್ತಾರೆ. ಇದರಲ್ಲಿ ತಾಜಾ ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ಸೇವಿಸ್ತಾರೆ. ಇದೇ ಅವರ ಫಿಟ್ನೆಸ್‌ ಸೀಕ್ರೆಟ್‌.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read