ಯಶಸ್ಸಿಗೆ ಮೆಟ್ಟಿಲು ಈ ಐದು ʼಮಾರ್ಗʼ

ಪ್ರಪಂಚದಲ್ಲಿ ಪ್ರತಿಯೊಬ್ಬರು ಯಶಸ್ಸನ್ನು ಬಯಸ್ತಾರೆ. ಆದ್ರೆ ಕೆಲವೇ ಕೆಲವು ಮಂದಿಗೆ ಯಶಸ್ಸು ಲಭಿಸುತ್ತದೆ. ಚಾಣಕ್ಯನ ಐದು ಮಾತುಗಳನ್ನು ನೆನಪಿಟ್ಟುಕೊಂಡು ಪಾಲಿಸುತ್ತ ಬಂದ್ರೆ ಯಶಸ್ಸು ನಿಮ್ಮದಾಗುತ್ತದೆ. ಗೆಲುವಿನ ಮೆಟ್ಟಿಲನ್ನು ನೀವು ಏರಲು ಶುರು ಮಾಡ್ತೀರಿ.

ಕಳೆದ ಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ. ಕಳೆದು ಹೋದ ಸಮಯ ಮತ್ತೆ ಬರಲು ಸಾಧ್ಯವಿಲ್ಲ. ಹಾಗಾಗಿ ಅದ್ರ ಬಗ್ಗೆ ಚಿಂತಿಸಿ ಕೂರಬಾರದು. ಹಾಗೆ ಭವಿಷ್ಯದ ಬಗ್ಗೆಯೂ ಚಿಂತಿಸಬಾರದು. ಈಗ ಆಗಬೇಕಾದ ಕೆಲಸದ ಬಗ್ಗೆ ಮಾತ್ರ ಆಲೋಚನೆ ಮಾಡಿ ಮುನ್ನಡೆಯಬೇಕು.

ಶಿಕ್ಷಣ ಸ್ನೇಹಪರವಾಗಿರಬೇಕು. ವಿದ್ಯಾವಂತ ವ್ಯಕ್ತಿಗೆ ಎಲ್ಲೆಡೆ ಗೌರವ ಸಿಗುತ್ತದೆ. ಬಲ ಮತ್ತು ಸೌಂದರ್ಯ ಎರಡೂ ಶಿಕ್ಷಣದ ಮುಂದೆ ಅರ್ಥಹೀನವಾಗಿರುತ್ತದೆ.

ಚಾಣಕ್ಯನ ಪ್ರಕಾರ ಬಹುತೇಕರು ಪರಿಸ್ಥಿತಿ ಬದಲಿಸಲು ಪ್ರಯತ್ನಿಸುವುದಿಲ್ಲ. ಹೇಗೆ ನಡೆದು ಬರ್ತಿದೆಯೋ ಹಾಗೆ ಇರಲಿ. ನಮಗೇಕೆ ಎಂದುಕೊಳ್ತಾರೆ. ಯಾರು ಭಿನ್ನವಾಗಿ ಆಲೋಚನೆ ಮಾಡಿ ಅದನ್ನು ಜಾರಿಗೆ ತರ್ತಾರೋ, ಸೋಲಿಗೆ ಹೆದರುವುದಿಲ್ಲವೋ ಅವ್ರು ಯಶಸ್ಸಿನ ಮೆಟ್ಟಿಲೇರುತ್ತಾರೆ.

ಸ್ನೇಹ ಯಾವಾಗಲೂ ಸಮಾನ ಜನರ ಜೊತೆ ಇರಬೇಕು. ಸಮಾನರಲ್ಲದ ಜನರು ಯಾವಾಗಲೂ ನೋವು ನೀಡುತ್ತಾರೆ.

ಒಬ್ಬ ವ್ಯಕ್ತಿ ಯಾವಾಗಲೂ ಇತರರ ತಪ್ಪುಗಳಿಂದ ಕಲಿಯುತ್ತಾನೆ. ಹೀಗೆ ಕಲಿಯುವುದು ತುಂಬಾ ಪ್ರಯೋಜನಕಾರಿ ಎಂದು ಚಾಣಕ್ಯ ಹೇಳಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read