ನಿಯಮಿತವಾಗಿ ಬೀಟ್‌ರೂಟ್‌ ತಿನ್ನುವುದರಿಂದ ಸಿಗುತ್ತೆ ಈ ಲಾಭ…!

ಬೀಟ್‌ರೂಟ್ ನಮ್ಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ತರಕಾರಿ. ಅದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಬೀಟ್ರೂಟ್ ಅನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ಬೀಟ್ರೂಟ್‌ ಜ್ಯೂಸ್‌, ಸಲಾಡ್‌ ಮಾತ್ರವಲ್ಲದೆ ಅನೇಕ ಮೇಲೋಗರಗಳಿಗೂ ಬಳಸಬಹುದು. ಎಷ್ಟೋ ಮಂದಿ ಬೀಟ್ರೂಟ್‌ ಅನ್ನು ಇಷ್ಟಪಡುವುದಿಲ್ಲ. ಅದರಲ್ಲಿರುವ ಪೌಷ್ಟಿಕಾಂಶದ ಮೌಲ್ಯವನ್ನು ತಿಳಿದಿರುವವರು ದೈನಂದಿನ ಆಹಾರದಲ್ಲಿ ಖಂಡಿತವಾಗಿ ಸೇರಿಸುತ್ತಾರೆ.

ಬೀಟ್ರೂಟ್‌ನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳು ಸೇರಿದಂತೆ ಅನೇಕ ಪೋಷಕಾಂಶಳಿವೆ. ನೀವು 10 ಗ್ರಾಂ ಬೀಟ್ರೂಟ್ ಸೇವಿಸಿದರೆ ಕೇವಲ 43 ಮಿಲಿಗ್ರಾಂ ಕ್ಯಾಲೋರಿ ನಿಮ್ಮ ದೇಹ ಸೇರುತ್ತದೆ, 2 ಗ್ರಾಂ ಕೊಬ್ಬನ್ನು ಪಡೆಯುತ್ತೀರಿ. ಅಂದರೆ ಬೀಟ್ರೂಟ್‌ ನಮ್ಮ ದೇಹದ ತೂಕವನ್ನು ಹೆಚ್ಚಿಸುವುದಿಲ್ಲ. ಇದರಲ್ಲಿ ಪ್ರೋಟೀನ್‌ ಕೂಡ ಸಮೃದ್ಧವಾಗಿದೆ. ನಮ್ಮ ದೇಹದ ಬೆಳವಣಿಗೆಗೆ ಬಹಳ ಮುಖ್ಯವಾದ ಅಂಶಗಳಿವು.

ಬೀಟ್ರೂಟ್ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ರೋಗಗಳು ಮತ್ತು ಸೋಂಕುಗಳಿಂದ ರಕ್ಷಿಸಲ್ಪಡುತ್ತವೆ. ವಿಶೇಷವಾಗಿ ಬೀಟ್ರೂಟ್‌ ಜ್ಯೂಸ್‌ ಮತ್ತು ಸಲಾಡ್ ಅನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆಗಾಗ್ಗೆ ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಎದುರಿಸ್ತಾ ಇದ್ರೆ ಬೀಟ್ರೂಟ್ ತಿನ್ನಿ. ಅದರಲ್ಲಿರುವ ಫೈಬರ್ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದು ನೈಸರ್ಗಿಕ ಸಕ್ಕರೆಯ ಸಮೃದ್ಧ ಮೂಲವಾಗಿದೆ. ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ ಬೀಟ್ರೂಟ್ ಸಲಾಡ್ ಅಥವಾ ಜ್ಯೂಸ್ ಸೇವಿಸಬೇಕು. ಇದರಿಂದ ಕೆಲವೇ ದಿನಗಳಲ್ಲಿ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಆಗಾಗ್ಗೆ ಆಯಾಸ ಅಥವಾ ದೌರ್ಬಲ್ಯ ಕಾಣಿಸಿಕೊಳ್ಳುತ್ತಿದ್ದರೆ ಅಂಥವರು ಕೂಡ ಬೀಟ್ರೂಟ್‌ ಅನ್ನು ತಿನ್ನಬೇಕು. ಬೀಟ್ರೂಟ್ ತಿನ್ನುವುದರಿಂದ ರಕ್ತ ಶುದ್ಧವಾಗುತ್ತದೆ.

ಇದು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ. ಬೀಟ್ರೂಟ್ ನಮ್ಮ ಸೌಂದರ್ಯಕ್ಕೆ ತುಂಬಾ ಮುಖ್ಯ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಮುಖಕ್ಕೆ ಅದ್ಭುತವಾದ ಹೊಳಪನ್ನು ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read