ಕೂದಲು ಉದುರದಂತೆ ರಕ್ಷಿಸುತ್ತವೆ ಈ 5 ಸೂಪರ್‌ ಫುಡ್ಸ್‌…..!

ಕೂದಲು ನಮ್ಮ ಸೌಂದರ್ಯಕ್ಕೆ ಕಳಸವಿಟ್ಟಂತಿರುತ್ತದೆ. ಹಾಗಾಗಿ ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸರಿಯಾದ ಪೋಷಣೆಯ ಅಗತ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಮತ್ತು ಅಕಾಲಿಕವಾಗಿ ಕೂದಲು ಬೆಳ್ಳಗಾಗುವ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ಕೂದಲಿನ ಆರೈಕೆಯಲ್ಲಿ ಆಹಾರದ್ದೇ ಪ್ರಮುಖ ಪಾತ್ರ. ಅಂತಹ 5 ಸೂಪರ್‌ ಫುಡ್‌ಗಳು ಯಾವುವು ಅನ್ನೋದನ್ನು ನೋಡೋಣ. ಇವುಗಳ ಸೇವನೆಯಿಂದ ಕೂದಲು ಉದುರುವಿಕೆ ನಿಲ್ಲುತ್ತದೆ ಜೊತೆಗೆ ಕೂದಲು ಬಲವಾಗುತ್ತದೆ.

ಮೊಸರು – ಕೂದಲಿನ ಪೋಷಣೆಗೆ ಬೇಕಾದ ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಅಗತ್ಯವನ್ನು ಪೂರೈಸಲು ಮೊಸರು ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ. ಮೊಸರು ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತದೆ. ಅದು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತಲೆ ಬೋಳಾಗದಂತೆ ರಕ್ಷಿಸುತ್ತದೆ.

ವಾಲ್‌ನಟ್ಸ್‌ – ಇದು ಕೂಡ ಕೂದಲಿಗೆ ಪ್ರಯೋಜನಕಾರಿಯಾಗಿದೆ. ವಾಲ್‌ನಟ್‌ಗಳಲ್ಲಿ ವಿಟಮಿನ್ ಇ, ವಿಟಮಿನ್ ಬಿ, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್‌ಗಳಿವೆ. ಈ ಎಲ್ಲಾ ಅಂಶಗಳು ಕೂದಲನ್ನು ಬಲವಾಗಿ ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ. ವಾಲ್‌ನಟ್‌ ಸೇವನೆಯಿಂದ ಕೂದಲು ಉದುರುವಿಕೆಯನ್ನೂ ತಡೆಯಬಹುದು.

ಅವಕಾಡೊ – ಆವಕಾಡೊ ಕೂಡ ಕೂದಲಿನ ಪೋಷಣೆಗೆ ಅತ್ಯಗತ್ಯ. ಫೋಲಿಕ್ ಆಮ್ಲ, ವಿಟಮಿನ್ ಇ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲ ಈ ಹಣ್ಣು. ಅವಕಾಡೊ ಸೇವನೆಯಿಂದ ಕೂದಲು ಬಲಗೊಳ್ಳುತ್ತದೆ. ಕೂದಲು ಉದುರುವುದನ್ನೂ ಇದು ತಡೆಯುತ್ತದೆ.

ಸೊಪ್ಪು – ಪಾಲಕ್ ಮತ್ತು ಮೆಂತ್ಯದಂತಹ ಸೊಪ್ಪಿನಲ್ಲಿ ಫೈಬರ್, ಫೋಲೇಟ್, ಕಬ್ಬಿಣ ಮತ್ತು ವಿಟಮಿನ್ ಸಿ ಇರುತ್ತದೆ. ಇದು ಕೂದಲಿನ ಆರೋಗ್ಯಕ್ಕೆ ಅವಶ್ಯಕ. ಸೊಪ್ಪು-ತರಕಾರಿಗಳು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತವೆ.

ಮೊಟ್ಟೆ – ಮೊಟ್ಟೆಗಳ ಸೇವನೆಯಿಂದ ಕೂಡ ಕೂದಲಿಗೆ ಸಂಪೂರ್ಣ ಪೋಷಣೆ ಸಿಗುತ್ತದೆ. ಇವುಗಳಲ್ಲಿ ಪ್ರೋಟೀನ್, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ಇರುತ್ತದೆ. ಇದು ಕೂದಲನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read