ʼರಕ್ತ ಹೀನತೆʼ ತಡೆಗಟ್ಟುತ್ತೆ ಈ 4 ಬಗೆಯ ಜ್ಯೂಸ್‌

ದೇಹದಲ್ಲಿ ರಕ್ತದ ಕೊರತೆ ಉಂಟಾದ್ರೆ ಅನೇಕ ರೀತಿಯ ಸಮಸ್ಯೆಗಳು ಶುರುವಾಗುತ್ತವೆ. ರಕ್ತಹೀನತೆಯಿದ್ದಾಗ ಏನು ತಿನ್ನಬೇಕು ಅನ್ನೋ ಗೊಂದಲವೂ ಶುರುವಾಗುತ್ತದೆ. ರಕ್ತದ ಕೊರತೆ ನೀಗಿಸುವಂತಹ ಹಣ್ಣು, ತರಕಾರಿಗಳ ಪಟ್ಟಿಯನ್ನು ವೈದ್ಯರೇ ನೀಡ್ತಾರೆ. ಅದರ ಜೊತೆಗೆ 4 ಬಗೆಯ ಜ್ಯೂಸ್‌ಗಳನ್ನು ಸೇವನೆ ಮಾಡಿದ್ರೆ ರಕ್ತದ ಕೊರತೆಯನ್ನು ಸುಲಭವಾಗಿ ಹೋಗಲಾಡಿಸಬಹುದು.

ದ್ರಾಕ್ಷಿ ಹಣ್ಣಿನ ಜ್ಯೂಸ್‌ : ದ್ರಾಕ್ಷಿ ಹಣ್ಣಿನ ಜ್ಯೂಸ್‌ ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಈ ಜ್ಯೂಸ್‌ ಕುಡಿದರೆ ದೇಹವೂ ತಂಪಾಗಿರುತ್ತದೆ. ಜೊತೆಗೆ ಹಿಮೋಗ್ಲೋಬಿನ್‌ ಹೆಚ್ಚಾಗುತ್ತದೆ. ದ್ರಾಕ್ಷಿಯನ್ನು ಹಾಗೇ ತಿನ್ನಬಹುದು. ಅಥವಾ ದ್ರಾಕ್ಷಿ ಜ್ಯೂಸ್‌ ಮಾಡಿಕೊಂಡು ಅದಕ್ಕೆ ಸ್ವಲ್ಪ ಬ್ಲಾಕ್‌ ಸಾಲ್ಟ್‌ ಸೇರಿಸಿಕೊಂಡು ಕುಡಿಯಿರಿ.

ಅಲೋವೆರಾ ಜ್ಯೂಸ್‌ : ಅಲೋವೆರಾ ಕೂಡ ರಕ್ತಹೀನತೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಕೂದಲಿನ ಆರೋಗ್ಯ ಹಾಗೂ ತ್ವಚೆಗೆ ಕೂಡ ಇದು ಪ್ರಯೋಜನಕಾರಿಯಾಗಿದೆ. ಪ್ರತಿದಿನ ಒಂದು ಲೋಟ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ರಕ್ತವನ್ನು ಶುದ್ಧೀಕರಿಸಬಹದು. ಇದರಿಂದ ಹಿಮೋಗ್ಲೋಬಿನ್ ಪ್ರಮಾಣ ಸಹ ಹೆಚ್ಚಾಗುತ್ತದೆ.

ಮಾವಿನ ಹಣ್ಣಿನ ಜ್ಯೂಸ್‌ : ರಕ್ತದ ಕೊರತೆ ಇದ್ದರೆ ಮಾವಿನ ಹಣ್ಣನ್ನು ತಿನ್ನಬೇಕು. ಅಥವಾ ಮಾವಿನ ಹಣ್ಣಿನ ಜ್ಯೂಸ್‌ ಮಾಡಿಕೊಂಡು ಕುಡಿಯಿರಿ. ಬೇಸಿಗೆ ಮಾವಿನ ಸೀಸನ್‌ ಕೂಡ ಆಗಿರುವುದರಿಂದ ನೀವು ಆರಾಮಾಗಿ ಇದನ್ನು ಸೇವನೆ ಮಾಡಬಹುದು.

ಬೀಟ್‌ರೂಟ್‌ ಜ್ಯೂಸ್‌ : ರಕ್ತಹೀನತೆ ಇದ್ದರೆ ಹೆಚ್ಹೆಚ್ಚು ಬೀಟ್ರೂಟ್‌ ತಿನ್ನುವಂತೆ ವೈದ್ಯರು ಸಲಹೆ ಕೊಡ್ತಾರೆ. ಬೀಟ್‌ರೂಟ್‌ ಅನ್ನು ಮೇಲೋಗರಗಳಲ್ಲಿ ಬಳಸಬಹುದು. ಅದು ಇಷ್ಟವಾಗದೇ ಇದ್ದರೆ ಜ್ಯೂಸ್‌ ಮಾಡಿ ಕುಡಿಯಿರಿ. ಇದರಿಂದ ಖಂಡಿತವಾಗಿಯೂ ರಕ್ತದ ಕೊರತೆ ನೀಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read