ಭಾರತದಲ್ಲಿ ಬಹಳ ಜನಪ್ರಿಯ ಈ 10 ಕಾರುಗಳು; ಮಾರಾಟದಲ್ಲಿ ಯಾವುದು ಮುಂದಿದೆ ಗೊತ್ತಾ…?

ಮಾರ್ಚ್ ತಿಂಗಳಲ್ಲಿ ದೇಶೀ ಮಾರುಕಟ್ಟೆಯಲ್ಲಿ ಸಾಕಷ್ಟು ಕಾರುಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಟಾಪ್ 10 ಕಾರುಗಳಲ್ಲಿ ಪ್ರಾಬಲ್ಯ ಹೊಂದಿದೆ. ಆದರೆ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವುದು ಟಾಟಾ ಪಂಚ್ ಎಸ್ ಯು ವಿ. ಟಾಟಾ ಪಂಚ್ ಬಿಡುಗಡೆಯಾಗಿ ಇನ್ನೂ 3 ವರ್ಷಗಳು ಕಳೆದಿಲ್ಲ, ಇಷ್ಟು ಕಡಿಮೆ ಸಮಯದಲ್ಲಿ ಎಸ್‌ಯುವಿ ಭಾರತೀಯ ಖರೀದಿದಾರರನ್ನು ಆಕರ್ಷಿಸಿದೆ. ಮಾರಾಟದಲ್ಲಿ ನೆಕ್ಸಾನ್ ಅನ್ನು ಟಾಟಾ ಪಂಚ್‌ ಹಿಂದಿಕ್ಕಿದೆ.

2024ರ ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಟಾಟಾ ಪಂಚ್. ಒಟ್ಟು 17,547 ಯುನಿಟ್‌ಗಳು ಮಾರಾಟವಾಗಿವೆ. ಇದರ ನಂತರದ ಸ್ಥಾನದಲ್ಲಿದೆ ಹ್ಯುಂಡೈ ಕ್ರೆಟಾ. ಒಟ್ಟು 16,458 ಕ್ರೆಟಾ ಯುನಿಟ್‌ಗಳು ಸೇಲ್‌ ಆಗಿವೆ. ನಂತರ ವ್ಯಾಗನಾರ್‌, ಡಿಜೈರ್, ಸ್ವಿಫ್ಟ್ ಮತ್ತು ಬಲೆನೊದಂತಹ ಮಾರುತಿಯ ಮಾದರಿಗಳಿವೆ. 7ನೇ ಸ್ಥಾನದಲ್ಲಿ ಮಹೀಂದ್ರ ಸ್ಕಾರ್ಪಿಯೊ (ಸ್ಕಾರ್ಪಿಯೋ ಎನ್ ಮತ್ತು ಕ್ಲಾಸಿಕ್) ಜೋಡಿಯಾಗಿವೆ. ಎರ್ಟಿಗಾ 8 ನೇ ಸ್ಥಾನದಲ್ಲಿದ್ದು, ಬ್ರೆಝಾ 9ನೇ ಮತ್ತು ನೆಕ್ಸನ್ 10ನೇ ಸ್ಥಾನದಲ್ಲಿದೆ.

ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳು

1-ಟಾಟಾ ಪಂಚ್‌ 17,547 ಯುನಿಟ್‌ ಮಾರಾಟ

2-ಹ್ಯುಂಡೈ ಕ್ರೆಟಾ 16,458 ಯುನಿಟ್‌ ಮಾರಾಟ

3-ಮಾರುತಿ ವ್ಯಾಗನ್ ಆರ್ 16,368 ಯುನಿಟ್‌ ಮಾರಾಟ

4-ಮಾರುತಿ ಡಿಜೈರ್‌ 15,894 ಯುನಿಟ್‌ ಮಾರಾಟ

5-ಮಾರುತಿ ಸ್ವಿಫ್ಟ್‌  15,728 ಯುನಿಟ್‌ ಮಾರಾಟ

6-ಮಾರುತಿ ಬಲೆನೊ 15,588 ಯುನಿಟ್‌ ಮಾರಾಟ

7- ಮಹೀಂದ್ರ ಸ್ಕಾರ್ಪಿಯೊ N + ಕ್ಲಾಸಿಕ್ 15,151 ಯುನಿಟ್‌  ಮಾರಾಟ

8-ಮಾರುತಿ ಎರ್ಟಿಗಾ 14,888 ಯುನಿಟ್‌ ಮಾರಾಟ

9-ಮಾರುತಿ ಬ್ರೆಝಾ 14,614 ಯುನಿಟ್‌ ಮಾರಾಟ

10-ಟಾಟಾ ನೆಕ್ಸಾನ್‌ 14,058 ಯುನಿಟ್‌ ಮಾರಾಟ

ಸದ್ಯ ಮಾರ್ಚ್‌ ತಿಂಗಳಲ್ಲಿ ಗ್ರಾಹಕರು ಟಾಟಾ ಪಂಚ್‌ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಪಂಚ್‌ನ ಆರಂಭಿಕ ಬೆಲೆ 6.13 ಲಕ್ಷ ರೂಪಾಯಿ. ಇದು ಪೆಟ್ರೋಲ್ ಮತ್ತು ಸಿಎನ್‌ಜಿ ರೂಪಾಂತರಗಳಲ್ಲಿ ಲಭ್ಯವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read