ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟೀನ್ ಸಭೆ ನಡೆಸಲಿದ್ದಾರೆ. ಸತತ ಮೂರು ಗಂಟೆಗಳ ಕಾಲ ಉಭಯ ನಯಾಕರ ನಡುವೆ ಚರ್ಚೆ ನಡೆದಿದೆ.
ತನ್ನ ಪರಿಸ್ಥಿತಿಗೆ ಉಬ್ರೇನ್ ದೇಶವೇ ಕಾರಣ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ಉಕ್ರೇನ್ ಕದನ ವಿರಾಮ ಕುರಿತಾಗಿ ಉಭಯ ನಾಯಕರು ಘೋಷಣೆ ಮಾಡಿಲ್ಲ, ಆದರೂ ಸಭೆ ಉತ್ತಮವಾಗಿತ್ತು ಎಂದು ಉಭಯ ನಾಯಕರು ಹೇಳಿದ್ದಾರೆ. ಮುಂದಿನ ಸಭೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯುವ ಸಾಧ್ಯತೆ ಇದೆ.
ಡೊನಾಲ್ಡ್ ಟ್ರಂಪ್ 2022 ರಲ್ಲಿ ಶ್ವೇತಭವನದಲ್ಲಿದ್ದರೆ ಉಕ್ರೇನ್‌ನಲ್ಲಿ ಯುದ್ಧ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಐದು ವರ್ಷಗಳಲ್ಲಿ ಅಮೆರಿಕ ಅಧ್ಯಕ್ಷರೊಂದಿಗಿನ ತಮ್ಮ ಮೊದಲ ಮುಖಾಮುಖಿ ಸಭೆಯನ್ನು ಸಂಬಂಧ ಪುನಃಸ್ಥಾಪನೆಯ ಭರವಸೆ ನೀಡಿದ್ದಾರೆ.
ಸಂಬಂಧಗಳಲ್ಲಿ ಮಾಸ್ಕೋ ಮತ್ತು ವಾಷಿಂಗ್ಟನ್ ಈಗ “ಉತ್ತಮ ನೇರ ಸಂಪರ್ಕಗಳನ್ನು” ಸ್ಥಾಪಿಸಿವೆ ಎಂದು ರಷ್ಯಾದ ನಾಯಕ ಹೇಳಿದ್ದು, “ಪರಿಸ್ಥಿತಿಯನ್ನು ಸರಿಪಡಿಸುವುದು ಅಗತ್ಯವಾಗಿತ್ತು”. “ನಮ್ಮ ದೇಶಗಳು ಸಾಮಾನ್ಯ ಶತ್ರುಗಳ ವಿರುದ್ಧ ಹೇಗೆ ಹೋರಾಡುತ್ತಿದ್ದವು ಎಂಬುದನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಈ ಪರಂಪರೆ ಭವಿಷ್ಯದಲ್ಲಿ ನಮಗೆ ಸಹಾಯ ಮಾಡುತ್ತದೆ. ಎಂದು ಹೇಳಿದ್ದಾರೆ.
ಸಭೆಯಲ್ಲಿ ಉಕ್ರೇನ್ “ಪ್ರಮುಖ ವಿಷಯಗಳಲ್ಲಿ ಒಂದಾಗಿದೆ”. ಯುದ್ಧವನ್ನು ಕೊನೆಗೊಳಿಸುವಲ್ಲಿ ರಷ್ಯಾ “ಪ್ರಾಮಾಣಿಕವಾಗಿ ಆಸಕ್ತಿ ಹೊಂದಿದೆ” ಎಂದು ಹೇಳಿದ್ದಾರೆ.