ಗುರುವಾರ ಈ ಕೆಲಸ ಮಾಡಿದ್ರೆ ತಪ್ಪಿದ್ದಲ್ಲ ಸಂಕಷ್ಟ

ಗುರುವಾರ ಈ ಕೆಲಸ ಮಾಡಬೇಡಿ ಎಂಬುದನ್ನು ಸಾಮಾನ್ಯವಾಗಿ ನೀವು ಹಿರಿಯರ ಬಾಯಿಂದ ಕೇಳಿರ್ತೀರಾ. ಯಾಕೆಂದ್ರೆ ಅದ್ರ ನಕಾರಾತ್ಮಕ ಪ್ರಭಾವ ನಮ್ಮ ಜೀವನದ ಮೇಲಾಗುತ್ತದೆ. ಆರ್ಥಿಕ ಸಂಕಷ್ಟ ಕಾಡುತ್ತದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಇದ್ರ ಬಗ್ಗೆ ಹೇಳಲಾಗಿದೆ. ಬೃಹಸ್ಪತಿಗೆ ಇಷ್ಟವಾಗದ ಕೆಲಸವನ್ನು ಗುರುವಾರ ಮಾಡಬಾರದು. ಸುಖ ಪರಿವಾರ, ಶಿಕ್ಷಣ, ಜ್ಞಾನ ಹಾಗೂ ಧನದ ಮೇಲೆ ಇದು ಪರಿಣಾಮ ಬೀರುತ್ತದೆ. ಮೊದಲೇ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು ಗುರುವಾರ ಮರೆತೂ ಕೆಲವು ಕೆಲಸಗಳನ್ನು ಮಾಡಬಾರದು.

ಪೋಷಕರು, ಗುರು, ಶಿಕ್ಷಕರು ಬೃಹಸ್ಪತಿಯ ಪ್ರತಿರೂಪ. ಹಾಗಾಗಿ ಎಂದೂ ಅವರನ್ನು ಅವಮಾನ ಮಾಡಬೇಡಿ.

ಕಿಚಡಿಯನ್ನು ಮನೆಯಲ್ಲಿ ತಯಾರಿಸಬೇಡಿ. ಹಾಗೆ ಗುರುವಾರ ಕಿಚಡಿಯನ್ನು ತಿನ್ನಬೇಡಿ.

ಉಗುರನ್ನು ಗುರುವಾರದಂದು ಕತ್ತರಿಸಬೇಡಿ.

ಗುರುವಾರದಂದು ಮಹಿಳೆಯರು ತಲೆ ಸ್ನಾನ ಮಾಡಬಾರದು. ಇದ್ರಿಂದ ಆಸ್ತಿ ಹಾಗೂ ಸಮೃದ್ಧಿಯಲ್ಲಿ ನಷ್ಟವುಂಟಾಗುತ್ತದೆ.

ಗುರುವಾರದಂದು ಬಟ್ಟೆಯನ್ನು ತೊಳೆಯಬಾರದೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಸೂರ್ಯ ಉದಯವಾಗುವ ಮೊದಲೇ ಎದ್ದು ಸ್ನಾನ ಮಾಡಿ ಸೂರ್ಯ ದೇವನಿಗೆ ಶುದ್ಧ ಹಸುವಿನ ತುಪ್ಪದಲ್ಲಿ ದೀಪ ಹಚ್ಚಿ. ಕೇಸರಿ ಅಥವಾ ಅರಿಶಿಣದ ತಿಲಕವನ್ನು ಹಣೆಗೆ ಹಚ್ಚಿಕೊಳ್ಳಿ. ಹಳದಿ ವಸ್ತುವನ್ನು ದಾನ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read