‘ಒಂದೆರಡು ಕೋಟಿ ಮುಸ್ಲಿಮರು ಸತ್ತರೆ ಅಡ್ಡಿಯಿಲ್ಲ’ : ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ

ನವದೆಹಲಿ: . 22 ಕೋಟಿ ಮುಸ್ಲಿಮರಲ್ಲಿ ಎರಡು ಕೋಟಿ ಮುಸ್ಲಿಮರು ಸತ್ತರೆ ಯಾವುದೇ ಸಮಸ್ಯೆಯಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಜೀಜ್ ಖುರೇಷಿ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನೋತ್ಸವದ ಸಲುವಾಗಿ ವಿದಿಶಾದಲ್ಲಿ ನೆರೆದಿದ್ದ ಮುಸ್ಲಿಂ ನಾಯಕರನ್ನು ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕರು ಈಗ ಹಿಂದುತ್ವದ ಮಂತ್ರ ಜಪಿಸುತ್ತಿದ್ದಾರೆ ಎಂದು ಸ್ವಪಕ್ಷದ ವಿರುದ್ಧವೇ ಆರೋಪಿಸಿದ್ದಾರೆ. ಜನರು ‘ಜೈ ಗಂಗಾ ಮೈಯಾ’ ಮತ್ತು ‘ಜೈ ನರ್ಮದಾ ಮೈಯಾ’ ನಂತಹ ಘೋಷಣೆಗಳನ್ನು ಕೂಗುವುದು ದೊಡ್ಡ ನಾಚಿಕೆಗೇಡಿನ ವಿಷಯ ಎಂದು ಖುರೇಷಿ ಆರೋಪಿಸಿದರು. ಆದರೆ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಲಿಲ್ಲ.  ಇರುವ 22 ಕೋಟಿ ಮುಸ್ಲಿಮರಲ್ಲಿ ಒಂದು ಅಥವಾ ಎರಡು ಕೋಟಿ ಮುಸ್ಲಿಮರು ತಮ್ಮ ಜೀವ ಕಳೆದುಕೊಂಡರೆ ದೊಡ್ಡ ವಿಷಯವೇನಲ್ಲ. ನನಗೆ ಯಾವ ಭಯವೂ ಇಲ್ಲ. ನನ್ನನ್ನು ಬೇಕಾದರೆ ಪಕ್ಷದಿಂದ ಉಚ್ಛಾಟಿಸಿ ಎಂದರು. ದೇಶದಲ್ಲಿ ಮುಸ್ಲಿಮರ ಬಗ್ಗೆ ಮಾತನಾಡಿದ ಖುರೇಷಿ, ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಸಮುದಾಯವು ತಮ್ಮ ಗುಲಾಮರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read