ನವರಾತ್ರಿ ಮತ್ತು 9 ಅಂಕಿಯ ನಡುವೆ ಇದೆ ವಿಶೇಷ ಸಂಬಂಧ; ಈ ಸಂಖ್ಯೆಯ ಜನರ ಮೇಲಿರುತ್ತದೆ ದೇವಿಯ ವಿಶೇಷ ಆಶೀರ್ವಾದ

ಚೈತ್ರ ನವರಾತ್ರಿ ಏಪ್ರಿಲ್ 9 ರಿಂದಲೇ ಪ್ರಾರಂಭವಾಗಿದೆ. ಏಪ್ರಿಲ್ 17 ರಂದು ರಾಮನವಮಿಯೊಂದಿಗೆ ಇದು ಕೊನೆಗೊಳ್ಳಲಿದೆ. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ದುರ್ಗಾದೇವಿಯ 9  ರೂಪಗಳನ್ನು ಪೂಜಿಸಲಾಗುತ್ತದೆ. ದೇವಿಯನ್ನು ಪೂರ್ಣ ಭಕ್ತಿಯಿಂದ ಪೂಜಿಸಿದರೆ ಭಕ್ತರ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯಿದೆ. ನವರಾತ್ರಿಯಲ್ಲಿ 9 ಅಂಕಿಗೆ ವಿಶೇಷ ಮಹತ್ವವಿದೆ.

ಮಾತೆಯ ಒಂಬತ್ತು ರೂಪಗಳ ಪೈಕಿ ಮೊದಲ ದಿನ ಮಾತಾ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಎರಡನೇ ದಿನ ತಾಯಿ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ಮೂರನೇ ದಿನ ಮಾತೆ ಚಂದ್ರಘಂಟಾ, ನಾಲ್ಕನೇ ದಿನ ಕೂಷ್ಮಾಂಡಾ ದೇವಿ, ನವರಾತ್ರಿಯ ಐದನೇ ದಿನ ಸ್ಕಂದಮಾತೆ, ಆರನೇ ದಿನ ಕಾತ್ಯಾಯನಿ, ಏಳನೇ ದಿನ ಕಾಳರಾತ್ರಿ, ಎಂಟನೇ ದಿನ ಮಹಾಗೌರಿ ಮತ್ತು ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ತಾಯಿಯ 9 ರೂಪಗಳು ಶಕ್ತಿ, ಧೈರ್ಯ, ಸೌಮ್ಯತೆ, ಶೌರ್ಯ ಇತ್ಯಾದಿಗಳನ್ನು ಪ್ರತಿನಿಧಿಸುತ್ತವೆ.

ಮಾತೃದೇವತೆಯ 9 ರೂಪಗಳ ಕಾರಣದಿಂದಾಗಿ ಮೂಲ ಸಂಖ್ಯೆ 9 ಹೊಂದಿರುವ ಜನರು ದೇವಿಯ ವಿಶೇಷ ಆಶೀರ್ವಾದವನ್ನು ಹೊಂದಿರುತ್ತಾರೆ. ಯಾವುದೇ ತಿಂಗಳ 9, 18 ಅಥವಾ 27 ರಂದು ಜನಿಸಿದವರು ಅದೃಷ್ಟವಂತರು. ಮಂಗಳ ಗ್ರಹದ ಜೊತೆಗೆ ಇವರಿಗೆ ದುರ್ಗಾದೇವಿಯ ವಿಶೇಷ ಆಶೀರ್ವಾದವೂ ಇರುತ್ತದೆ.

ಕುಂಡಲಿಯಲ್ಲಿ ಮಂಗಳವು ದುರ್ಬಲವಾಗಿದ್ದರೆ ನವರಾತ್ರಿಯ ಒಂಬತ್ತು ದಿನಗಳಲ್ಲಿ ಮಾತೃ ದೇವಿಯನ್ನು ಸ್ತುತಿಸುವುದರಿಂದ ಪ್ರಯೋಜನವಾಗುತ್ತದೆ. ವಿಶೇಷವಾಗಿ ನವರಾತ್ರಿಯ ಐದನೇ ದಿನದಂದು ತಾಯಿ ಸ್ಕಂದಮಾತೆಯನ್ನು ಪೂಜಿಸುವುದರಿಂದ ಜಾತಕದಲ್ಲಿ ಮಂಗಳನ ಸ್ಥಾನವು ಬಲಗೊಳ್ಳುತ್ತದೆ.

9 ಅಂಕಿಯನ್ನು ಹೊಂದಿರುವ ಜನರು ಹೇಗಿರುತ್ತಾರೆ?

ಜನ್ಮ ದಿನಾಂಕದಲ್ಲಿ 9 ಹೊಂದಿರುವ ವ್ಯಕ್ತಿಯು ಮಂಗಳನ ಪ್ರಭಾವಕ್ಕೆ ಒಳಗಾಗುತ್ತಾರೆ. ಅವರು ಧೈರ್ಯಶಾಲಿ, ತೀಕ್ಷ್ಣ, ಬುದ್ಧಿವಂತ ಮತ್ತು ಕಠಿಣ ಪರಿಶ್ರಮಿಯಾಗಿರುತ್ತಾರೆ. ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸುವಲ್ಲಿ ಇವರು ನಿಪುಣರು. ತಮ್ಮ ಧೈರ್ಯ ಮತ್ತು ಕಠಿಣ ಪರಿಶ್ರಮದಿಂದ ಅವರು ಜೀವನದಲ್ಲಿ ಉನ್ನತ ಸ್ಥಾನಮಾನವನ್ನು ಸಾಧಿಸುತ್ತಾರೆ. ಬಹಳ ದಾನಶೀಲರು, ಇನ್ನೊಬ್ಬರ ಸಮಸ್ಯೆಯನ್ನು ತಮ್ಮದೆಂದು ಸ್ವೀಕರಿಸಿ ಸಹಾಯ ಮಾಡುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read