ಸದ್ದಿಲ್ಲದೆ ಕಾಡುವ ಪಾರ್ಶ್ವವಾಯು ಸಮಸ್ಯೆಗೆ ಇದೆ ಮನೆ ಮದ್ದು

ಸದ್ದಿಲ್ಲದೆ ಕಾಡುವ ರೋಗಗಳಲ್ಲಿ ಪಾರ್ಶ್ವವಾಯು ಕೂಡ ಒಂದು. ಕೈ, ಕಾಲು ಕೆಲಸ ಮಾಡುವುದಿಲ್ಲ. ಬಾಯಿಗೆ ಪಾರ್ಶ್ವವಾಯು ಹೊಡೆದ್ರೆ ಮಾತನಾಡೋದು ಕಷ್ಟವಾಗುತ್ತದೆ. ಏಕಾಏಕಿ ಬರುವ ಈ ಪಾರ್ಶ್ವವಾಯುವಿನಿಂದ ಚೇತರಿಸಿಕೊಳ್ಳುವುದು ಕಷ್ಟ.

ತುಂಬಾ ದಿನ ಸರಿಯಾಗಿ ಔಷಧಿ ಬಿದ್ರೆ ಮಾತ್ರ ಮತ್ತೆ ಮೊದಲಿನಂತಾಗಲು ಸಾಧ್ಯ. ಪಾರ್ಶ್ವವಾಯುವಿಗೆ ಒಳಗಾದವರು ಮನೆ ಮದ್ದನ್ನು ಬಳಸಿ ಬೇಗ ಗುಣಮುಖರಾಗಬಹುದು.

ಒಂದು ಚಮಚ ಕರಿ ಮೆಣಸನ್ನು ಪುಡಿ ಮಾಡಿ ತುಪ್ಪಕ್ಕೆ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಲೇಪವನ್ನು ಸಿದ್ಧಪಡಿಸಿ. ಇದನ್ನು ಪಾರ್ಶ್ವವಾಯು ಬಡಿದ ಜಾಗಕ್ಕೆ ಹಾಕಿ ಮಸಾಜ್ ಮಾಡಿ. ಹೀಗೆ ಮಾಡಿದ್ರೆ ಪಾರ್ಶ್ವವಾಯು ಬಡಿದ ಜಾಗ ನಿಧಾನವಾಗಿ ಸರಿಯಾಗುತ್ತ ಬರುತ್ತದೆ.

ನಿಯಮಿತ ರೂಪದಲ್ಲಿ ಹಾಗಲಕಾಯಿ ಮತ್ತು ತರಕಾರಿಯನ್ನು ಸೇವಿಸುತ್ತ ಬನ್ನಿ. ಹೀಗೆ ಮಾಡಿದ್ರೆ ಪಾರ್ಶ್ವವಾಯು ಸಮಸ್ಯೆ ಬೇಗ ಕಡಿಮೆಯಾಗುತ್ತದೆ.

ಈರುಳ್ಳಿ ಕೂಡ ಈ ಸಮಸ್ಯೆಗೆ ಮುಕ್ತಿ ನೀಡುತ್ತದೆ. ನಿಯಮಿತವಾಗಿ ಈರುಳ್ಳಿ ರಸ ಅಥವಾ ಈರುಳ್ಳಿ ಸೇವನೆ ಮಾಡಬೇಕಾಗುತ್ತದೆ.

6 ಬೆಳ್ಳುಳ್ಳಿಯನ್ನು ರುಬ್ಬಿ ರಸ ಮಾಡಿ ಅದಕ್ಕೆ ಒಂದು ಚಮಚ ಬೆಣ್ಣೆ ಹಾಕಿ ಇದನ್ನು ಪ್ರತಿದಿನ ಸೇವನೆ ಮಾಡುತ್ತ ಬನ್ನಿ.

ತುಳಸಿ ಎಲೆ, ಮೊಸರು ಮತ್ತು ಉಪ್ಪನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಪಾರ್ಶ್ವವಾಯು ಸ್ಥಳಕ್ಕೆ ಹಚ್ಚಿದ್ರೆ ಕೆಲಸ ನಿಲ್ಲಿಸಿದ ಅಂಗ ಮತ್ತೆ ಕೆಲಸ ಶುರು ಮಾಡುತ್ತದೆ.

ತುಳಸಿ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ. ಪಾರ್ಶ್ವವಾಯು ಆಗಿರುವ ಜಾಗಕ್ಕೆ ಈ ನೀರಿನ ಶಾಖ ಕೊಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read