ನೇಪಾಳದಲ್ಲಿವೆ ಹಲವು ಹಿಂದೂ ದೇವಾಲಯಗಳು

ಭಾರತದ ನೆರೆ ರಾಷ್ಟ್ರ ನೇಪಾಳದೊಂದಿಗೆ ಯುಗಯುಗಗಳಿಂದ ಸಂಬಂಧವಿದೆ ಎಂಬುದನ್ನು ತೋರಿಸುವ ಹಲವು ಸಾಕ್ಷಿಗಳಿವೆ. ಪೌರಾಣಿಕ ಗ್ರಂಥಗಳಲ್ಲಿ ಮಾತ್ರವಲ್ಲ ದೇವಾಲಯಗಳು ಕೂಡಾ ಹಿಂದುತ್ವವನ್ನೇ ಸಾರುತ್ತವೆ.

ವಾಲ್ಮೀಕಿ ಪುರಾಣದಲ್ಲಿ ಸೀತೆ ಜಾನಕಪುರದಲ್ಲಿ ಜನಿಸಿದವಳೆಂದು ಹೇಳಲಾಗಿದೆ. ಅದರಂತೆ ನೇಪಾಳದ ಜಾನಕಪುರದಲ್ಲಿ ಜಾನಕಿ ಅಂದರೆ ಸೀತಾ ಮಾತೆಯ ದೇವಾಲಯವಿದೆ. ಸೀತೆ ರಾಮನ ವಿವಾಹಕ್ಕೂ ಮುನ್ನ ಈ ಸ್ಥಳದಲ್ಲೇ ವಾಸಿಸುತ್ತಿದ್ದಳು ಎನ್ನಲಾಗಿದೆ.
ಧನುಷಾಧಾಮವೂ ಇಲ್ಲಿದೆ. ಶಿವಧನಸ್ಸನ್ನು ಶ್ರೀರಾಮನು ಮುರಿಯುತ್ತಾನೆ. ಅಗ ಅದರ ಮೂರನೆಯ ಒಂದು ಭಾಗ ಇಲ್ಲಿ ಬಿದ್ದು ಅ ಸ್ಥಳವೇ ಧನುಷಾಧಾಮವಾಗಿ ಮಾರ್ಪಟ್ಟಿದೆ.

ನೇಪಾಳದಲ್ಲಿ ಮಣಿ ಮಂಟಪವಿದ್ದು ಅದು ಸೀತಾ ದೇವಿ ಮತ್ತು ಭಗವಾನ್ ರಾಮರ ವಿವಾಹಕ್ಕೆ ಸಂಬಂಧಿಸಿದ ಮಂಟಪ ಎನ್ನಲಾಗಿದೆ. ಇದೇ ಮಂಟಪದಲ್ಲಿ ರಾಮ ಸೇರಿದಂತೆ ನಾಲ್ವರು ಸಹೋದರರ ವಿವಾಹ ನಡೆಯಿತು ಎನ್ನಲಾಗಿದೆ. ಇದು ರಾಣಿ ಬಜಾರ್ ನಲ್ಲಿದೆ.
ಈ ಎಲ್ಲಾ ಸ್ಥಳಗಳು, ದೇವಾಲಯಗಳು ನೇಪಾಳದಲ್ಲಿವೆ. ಇಲ್ಲಿ ಇಂದೂ ಹಿಂದೂ ಸಂಪ್ರದಾಯದಂತೆ ಪೂಜೆಗಳು ನಡೆಯುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read