ಲವಂಗ ಸೇವನೆಯಿಂದ ಇದೆ ಹಲವು ಪ್ರಯೋಜನ

ಲವಂಗ ಗಾತ್ರದಲ್ಲಿ ಸಣ್ಣದಿರಬಹುದು. ಆದರೆ ಅದರ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಇದರ ಬೇರು, ಚೆಕ್ಕೆ, ಎಣ್ಣೆ, ಎಲೆ, ಮೊಗ್ಗು ಹೀಗೆ ಪ್ರತಿಯೊಂದೂ ಹಲವು ಪ್ರಯೋಜನಗಳನ್ನು ಕೊಡುವ ಸಾಮಾಗ್ರಿಯೇ ಆಗಿದೆ.

ರಾತ್ರಿ ಮಲಗುವ ಮುನ್ನ 2 ಲವಂಗವನ್ನು ಪುಡಿ ಮಾಡಿ ಬಿಸಿನೀರಿನೊಂದಿಗೆ ಬೆರೆಸಿ ಕುಡಿದರೆ ಶೀತ, ಕಫದಂಥ ಸಮಸ್ಯೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. ಪದೇ ಪದೇ ವೈದ್ಯರನ್ನು ಭೇಟಿಯಾಗುವ ಕಷ್ಟವನ್ನು ಇದು ನಿವಾರಿಸುತ್ತದೆ.

ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿರುವ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಲವು ಸೋಂಕುಗಳ ವಿರುದ್ಧ ಹೋರಾಡಲು ನಮ್ಮ ದೇಹ ಸಜ್ಜಾಗುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಲವಂಗ ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ ನಿದ್ರಾಹೀನತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಮೆದುಳನ್ನು ಶಾಂತಗೊಳಿಸುವ ವಿಶೇಷ ಗುಣ ಇದಕ್ಕಿದ್ದು ನಿಮಗೆ ಗಾಢ ನಿದ್ದೆ ತಂದುಕೊಡುತ್ತದೆ ಮಾತ್ರವಲ್ಲ ಖಿನ್ನತೆಯನ್ನೂ ದೂರ ಮಾಡುತ್ತದೆ. ಗರ್ಭಿಣಿಯರು ಇದನ್ನು ವೈದ್ಯರ ಸಲಹೆ ಪಡೆದೇ ಸೇವಿಸುವುದು ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read