ಆಧಾರ್ ಕಾರ್ಡ್‌ನಲ್ಲಿವೆ 4 ವಿಧಗಳು, ಇಲ್ಲಿದೆ ಅವುಗಳ ವೈಶಿಷ್ಟ್ಯತೆ ಮತ್ತು ಸಂಪೂರ್ಣ ವಿವರ….!

ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನ ಅಗತ್ಯ ID ಪುರಾವೆಯಾಗಿ ಹೊರಹೊಮ್ಮಿದೆ. ಇದು ವಿಶಿಷ್ಟ 12 ಅಂಕೆಗಳ ಸಂಖ್ಯೆಯಾಗಿದ್ದು, ಇದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೀಡಲಾಗುತ್ತದೆ.

UIDAI ಪ್ರಕಾರ, ಆಧಾರ್ ಕಾರ್ಡ್ ಅನ್ನು ನಾಲ್ಕು ವಿಧದ ಸ್ವರೂಪಗಳಲ್ಲಿ ಮಾನ್ಯವೆಂದು ಪರಿಗಣಿಸಲಾಗುತ್ತದೆ. ಆಧಾರ್ ಪತ್ರವು ಕಾಗದ ಆಧಾರಿತ ಲ್ಯಾಮಿನೇಟೆಡ್ ಕಾರ್ಡ್‌. ಈ ಆಧಾರ್‌ನಲ್ಲಿ ಅದನ್ನು ಮುದ್ರಿಸಿದ ದಿನಾಂಕದೊಂದಿಗೆ, ಆಧಾರ್ ರಚನೆಯ ದಿನಾಂಕವನ್ನು ಸಹ ದಾಖಲಿಸಲಾಗಿರುತ್ತದೆ.

PVC ಆಧಾರ್ ಕಾರ್ಡ್ ಹಗುರವಾದ ಮತ್ತು ಬಾಳಿಕೆ ಬರುವ ಕ್ರೆಡಿಟ್ ಕಾರ್ಡ್‌ನಂತೆ. ನಿಮ್ಮ ಆಧಾರ್ ಕಳೆದು ಹೋದರೆ ನೀವು ಕೇವಲ 50 ರೂಪಾಯಿ ಪಾವತಿಸಿ PVC ಆಧಾರ್ ಕಾರ್ಡ್ ಅನ್ನು ಆರ್ಡರ್ ಮಾಡಬಹುದು.

mAadhaar ಯುಐಡಿಎಐ ನೀಡಿದ ಡಿಜಿಟಲ್ ಆಧಾರ್ ಕಾರ್ಡ್ ಆಗಿರುತ್ತದೆ. ಈ ಅಪ್ಲಿಕೇಶನ್, ಆಧಾರ್‌ನಲ್ಲಿ ನಮೂದಿಸಿದ ಮಾಹಿತಿಯೊಂದಿಗೆ ಫೋಟೋವನ್ನು ಸಹ ಒಳಗೊಂಡಿದೆ. ಯಾವುದೇ ಶುಲ್ಕವಿಲ್ಲದೆ ಈ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.

ಇ-ಆಧಾರ್ ಕಾರ್ಡ್ ಪಾಸ್‌ವರ್ಡ್‌ನಿಂದ ರಕ್ಷಿಸಲ್ಪಟ್ಟ ಎಲೆಕ್ಟ್ರಾನಿಕ್ ಆಧಾರ್ ಕಾರ್ಡ್ ಆಗಿದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಮಾತ್ರ ನೀವು ಯುಐಡಿಎಐ ಅಧಿಕೃತ ವೆಬ್‌ಸೈಟ್‌ನಿಂದ ಇ-ಆಧಾರ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಈ ರೀತಿ ನಾಲ್ಕು ವಿಧಗಳಲ್ಲಿ ಪ್ರಾಧಿಕಾರ ಭಾರತೀಯ ನಾಗರಿಕರಿಗೆ ಆಧಾರ್‌ ಕಾರ್ಡ್‌ ಅನ್ನು ವಿತರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read