ಬೆಂಗಳೂರು: ಚಿನ್ನದಂಘಡಿಗೆ ನುಗ್ಗಿದ್ದ ಕಳ್ಳರ ಗ್ಯಾಂಗ್ ಪ್ಲಾಸ್ಟಿಕ್ ಗನ್ ತೋರಿಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳ್ಯ್ರಿನ ಮಾದನಾಯಕನಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮ್ಮದ್ ರಫಿಕ್, ಮೊಹಮ್ಮದ್ ಇಬ್ತೇಕರ್, ರಂಶಾದ್ ಎಂದು ಗುರುತಿಸಲಾಗಿದೆ. ಬಂಧಿತರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬಂಧಿತರು ಉಡುಪಿ, ಒಡಿಶಾ, ಮಂಗಳೂರು ಮೂಲದ ಆರೋಪಿಗಳು ಎನ್ನಲಾಗಿದೆ.
ನಾಲ್ವರು ಆರೋಪಿಗಳಲ್ಲಿ ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಮೂವರನ್ನು ಬಂಧಿ೮ಸಲಾಗಿದೆ. ಜೂನ್ 25ರಂದು ಮಾಗಡಿ ರಸ್ತೆಯ ಮಾಚೇನಹಳ್ಳಿಯಲ್ಲಿ ಜ್ಯುವೆಲ್ಲರಿ ಶಾಪ್ ಗೆ ಗ್ಯಾಂಗ್ ವೊಂದು ನುಗ್ಗಿತ್ತು. ಪ್ಲಾಸ್ಟಿಕ್ ಗನ್ ಹಿಡಿದು ಅಂಗಡಿ ಮಾಲೀಕನನ್ನು ಬೆದರಿಸಿ 90 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಸದ್ಯ ಬಂಧಿತ ಆರೋಪಿಗಳಿಂದ 90 ಗ್ರಾಂ ಚಿನ್ನ, ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.