BIG NEWS: ಥಿಯೇಟರ್ ಮಾಲೀಕನನ್ನು ಕಟ್ಟಿ ಹಾಕಿ ಮನೆ ಕೆಲಸದವರಿಂದಲೇ ಕಳ್ಳತನ: ದಂಪತಿ ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಸಂಪಿಗೆ ಥಿಯೇಟರ್ ಮಾಲೀಕರನ್ನು ಕಟ್ಟಿಹಾಕಿ ಅವರ ಮನೆ ಕಳ್ಳತನ ಮಾಡಿ ದಂಪತಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ರನ್ನು ಜಯನಗರದ ಅವರದೇ ಮನೆಯಲ್ಲಿ ಮನೆ ಕೆಲಸಕ್ಕೆಂದು ಇದ್ದ ದಂಪತಿಯೇ ಅವರನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ನಾಗೇಶ್ ಅವರ ಕುಟುಂಬ ಕಾರ್ಯಕ್ರಮದ ನಿಮಿತ್ತ ಹೊರ ಹೋಗಿದ್ದರು. ಈ ವೇಳೆ ನಾಗೇಶ್ ಒಬ್ಬರೇ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಮನೆ ಕೆಲಸಕ್ಕಿದ್ದ ನೇಪಾಳ ಮೂಲದ ದಂಪತಿ ಗಣೇಶ್ ಹಾಗೂ ಗೀತಾ ಅ.2ರಂದು ನಾಗೇಶ್ ಅವರ ಕೈಕಾಲು ಕಟ್ಟಿಹಾಕಿ ಮನೆಯಲ್ಲಿದ್ದ ನಗದು ಹಣ, ಚಿನ್ನಾಭರಣ ಕದ್ದು ಪರಾರಿಯಾಗಿತ್ತು.

ನಾಗೇಶ್ ಅವರ ಜಯನಗರದ ಮೂರನೇ ಬ್ಲಾಕ್ ನ ಮನೆಯಲ್ಲಿ ಈ ಘಟನೆ ನಡೆದಿತ್ತು. ಕಳೆದ 2 ವರ್ಷಗಳಿಂದ ನಾಗೇಶ್ ಅವರ ಮನೆಯಲ್ಲಿ ದಂಪತಿ ಕೆಲಸಕ್ಕಿದ್ದರು. 1 ಕೆಜಿ ಚಿನ್ನಾಭರಣ ಹಾಗೂ 2 ಲಕ್ಷ ರೂಪಾಯಿ ಹಣ ಕದ್ದು ದಂಪತಿ ಎಸ್ಕೇಪ್ ಆಗಿದ್ದರು. ಈ ಬಗ್ಗೆ ನಾಗೇಶ್ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೊಬೈಲ್ ಲೊಕೇಶನ್, ಸಿಸಿಟಿವಿ ಆಧರಿಸಿ ಕಾರ್ಯಾಚರಣೆ ನಡೆಸಿದ ಜಯನಗರ ಪೊಲೀಸರು ಮುಂಬೈ ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read